ಕಾಸರಗೋಡು: ರೋಗಲಕ್ಷಣಗಳನ್ನು ಹೊಂದಿರುವ ವೃದ್ಧರು ಮತ್ತು ಇತರ ಗಂಭೀರ ಕಾಯಿಲೆ ಇರುವವರು ಕೋವಿಡ್ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಹೇಳಿದ್ದಾರೆ.
ಇತರ ಗಂಭೀರ ಕಾಯಿಲೆಗಳಿರುವ ಜನರಲ್ಲಿ ಕೋವಿಡ್ ರೋಗ ದೃಢಪಡಿಸುವಿಕೆ ವಿಳಂಬಗೊಳ್ಳುವುದರಿಂದ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಆಗಸ್ಟ್ ನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮೃತಪಟ್ಟ 53 ಜನರ ಸಂಪೂರ್ಣ ಮಾಹಿತಿಯ ವಿಶ್ಲೇಷಣೆಯಿಂದ ಇದು ಸ್ಪಷ್ಟವಾಗಿದೆ. ಇವುಗಳಲ್ಲಿ 25 ಶೇ. ಪ್ರಕರಣಗಳಲ್ಲಿ, ಸೋಂಕು ಮತ್ತು ಪರೀಕ್ಷೆಯ ನಡುವೆ ಐದು ಅಥವಾ ಹೆಚ್ಚು ದಿನಗಳು ತೆಗೆದುಕೊಂಡಿರುವುದು ವೇದ್ಯವಾಗಿದೆ. ಈ ಡೇಟಾವು ಸೋಂಕು ಮತ್ತು ರೋಗನಿರ್ಣಯದ ನಡುವಿನ ಸರಾಸರಿ ಸಮಯ 3.32 ದಿನಗಳು ಎಂದು ತೋರಿಸುತ್ತದೆ. ಆದ್ದರಿಂದ, ಇತರ ಗಂಭೀರ ಕಾಯಿಲೆಗಳನ್ನು ಹೊಂದಿರುವವರನ್ನು ತಕ್ಷಣವೇ ಪರೀಕ್ಷಿಸಬೇಕು ಮತ್ತು ಅವರು ಕೋವಿಡ್ ರೋಗಲಕ್ಷಣಗಳನ್ನು ಹೊಂದಿದ್ದರೆ ಆಸ್ಪತ್ರೆಯ ತಜ್ಞರ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಹೇಳಿರುವರು.