ಕಾಬೂಲ್: ದೇಶದಲ್ಲಿ ಯುದ್ಧ ಕೊನೆಗೊಂಡಿದೆ, ಇನ್ನೇನಿದ್ದರೂ ಸರ್ಕರ ರಚನೆ ಮಾತ್ರ ಬಾಕಿ ಉಳಿದಿದೆ ಎಂದು ತಾಲಿಬಾನ್ ವಕ್ತಾರ ಜಬೀಯುಲ್ಲ ಮುಜಾಹಿದ್ ಹೇಳಿದ್ದಾರೆ. ಸೋಮವಾರ ಬೆಳಿಗ್ಗೆಯಷ್ಟೆ ಪಂಜ್ ಶಿರ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಡಿರುವುದಾಗಿ ಘೋಷಿಸಿತ್ತು.
ಪಂಜ್ ಶಿರ್ ಪ್ರಾಂತ್ಯ ಪೂರ್ತಿಯಾಗಿ ತಾಲಿಬಾನ್ ವಶವಾಗಿಲ್ಲ ಎಂದು ಎನ್ ಆರ್ ಎಫ್ ನಾಯಕರು ತಾಲಿಬಾನ್ ಘೋಷಣೆಯನ್ನು ನಿರಾಕರಿಸಿದ್ದರು. ಪಂಜ್ ಶಿರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ಪಾಳೆಯ ನೆಲೆಗೊಂಡಿತ್ತು.
ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ಸಂಘಟನೆ ರಚನೆಯಾಗಿ ತಾಲಿಬಾನ್ ವಿರುದ್ಧ ಹೋರಾಡುವುದಾಗಿ ತಿಳಿಸಿತ್ತು. ಆಫ್ಘನ್ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಎನ್ ಆರ್ ಎಫ್ ಪಡೆಯ ನೇತೃತ್ವ ವಹಿಸಿಕೊಂಡಿದ್ದಾರೆ.
ತಾಲಿಬಾನ್ ವಕ್ತಾರ ಚೀನಾ ಜೊತೆಗೆ ತಾವು ಉತ್ತಮ ಸಂಬಂಧ ಹೊಂದಲು ಇಚ್ಛಿಸುವುದಾಗಿ ತಿಳಿಸಿದ್ದಾರೆ. ಚೀನಾ ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳಲ್ಲಿ ಒಂದು. ಅಫ್ಘಾನಿಸ್ತಾನದ ಮರುನಿರ್ಮಾಣದಲ್ಲಿ ಅದರ ನೆರವು ನಮ ಅತ್ಯಗತ್ಯ ಎಂದವರು ಅಭಿಪ್ರಾಯಪಟ್ಟಿದ್ದಾರೆ.