ತಿರುವನಂತಪುರಂ: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದರೂ, ಜನರು ಇನ್ನೂ ಲಸಿಕೆ ಪಡೆಯುತ್ತಿಲ್ಲ. ಎರಡನೇ ಡೋಸ್ ಸ್ವೀಕರಿಸಲು ಜನರು ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಇದೇ ವೇಳೆ, ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳು ವಿತರಿಸಲು ಬಾಕಿಯಾಗಿ ರಾಶಿಬಿದ್ದಿದೆ ಎಂದು ವರದಿಯಾಗಿದೆ.
ಕೊರೋನಾದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಾರ್ವಜನಿಕರಿಗೆ ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಹಾಕಿಸಲು ಸಾಧ್ಯವಾಗದಿರುವುದು ರಾಜ್ಯದಲ್ಲಿ ಲಸಿಕೆ ಪೂರೈಕೆಯನ್ನು ಮತ್ತಷ್ಟು ನಿಧಾನಗೊಳಿಸಿದೆ. ದೇಶವು ಲಸಿಕೆಯ ಯಶಸ್ಸನ್ನು ಸಮೀಪಿಸುತ್ತಿರುವಾಗ ಇದು ಕೇರಳದ ದುಸ್ಥಿತಿ.
ಲಸಿಕೆ ಕೊರತೆಗೆ ಖಾಸಗಿ ವಲಯದ ಮೂಲಕ ಲಸಿಕೆಯನ್ನು ಮುಕ್ತಗೊಳಿಸುವುದು ತುರ್ತು ಬೇಕಿದೆ ಎಂಬ ಬೇಡಿಕೆ ಬಲಗೊಂಡಿದೆ. ಇದು ಲಸಿಕೆಯ ವಿತರಣೆಯನ್ನು ವೇಗಗೊಳಿಸುತ್ತದೆ ಎಂದು ನಂಬಲಾಗಿದೆ.