ಕಾಸರಗೋಡು: ಮಂಜೇಶ್ವರ ಚುನಾವಣಾ ಹಗರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಮತ್ತೆ ಕ್ರೈಂ ಬ್ರಾಂಚ್ ನೋಟಿಸ್ ನೀಡಲಾಗಿದೆ. ಮೊಬೈಲ್ ಪೋನ್ ನ್ನು ಪರಿಶೀಲನೆಗೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.
ಬಿ.ಎಸ್.ಪಿ. ಅಭ್ಯರ್ಥಿಯಾಗಿ ಕೆ.ಸುರೇಂದ್ರನ್ ವಿರುದ್ದ ಕಣದಲ್ಲಿದ್ದ ಸುಂದರ ಅವರಿಗೆ ಮಂಜೇಶ್ವರದಿಂದ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಲಂಚ ನೀಡಲಾಯಿತು ಮತ್ತು ಬೆದರಿಕೆ ಹಾಕಲಾಗಿದೆ ಎಂದು ದೂರಲಾಗಿತ್ತು. ನಾಮಪತ್ರ ಹಿಂಪಡೆಯಲು ಸುಂದರ ಅವರು ಮಂಗಳೂರಿನಲ್ಲಿ ವೈನ್ ಪಾರ್ಲರ್ ಮತ್ತು 15 ಲಕ್ಷ ರೂ. ಬೇಡಿಕೆ ಇರಿಸಿದ್ದು, ಆದರೆ ಎರಡೂವರೆ ಲಕ್ಷ ರೂ ಮತ್ತು 15 ಸಾವಿರ ರೂ.ಗಳ ಮೊಬೈಲ್ ಪೋನ್ ನೀಡಿರುವುದಾಗಿ ಚುನಾವಣೆಯ ಬಳಿಕ ಸುಂದರ ಬಹಿರಂಗವಾಗಿ ತಿಳಿಸಿದ್ದರು.
ಪ್ರಕರಣದಲ್ಲಿ ಈ ಮೊದಲು ತನಿಖಾ ತಂಡವು ಸುರೇಂದ್ರನನ್ನು ಪ್ರಶ್ನಿಸಿದಾಗ ನೀಡಿದ ಮುಖ್ಯ ಹೇಳಿಕೆಯ ಬಳಿಕ ಎಲ್ಲಾ ಕಪ್ಪು ಹಣವನ್ನೂ ಪತ್ತೆಹಚ್ಚಲಾಗಿತ್ತು. ಕಳೆದ ಗುರುವಾರ, ಕಾಸರಗೋಡು ಅಪರಾಧ ವಿಭಾಗದ ನೇತೃತ್ವವನ್ನು ಡಿವೈಎ ಎಸ್ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಮಗ್ರ ತನಿಖೆ ನಡೆಸಲಾಗಿತ್ತು.
ಪ್ರಕರಣದ ಒಂದು ಪ್ರಮುಖ ಸಾಕ್ಷ್ಯವಾದ ಮೊಬೈಲ್ ಫೆÇೀನ್ ಕಳೆದುಹೋಗಿದೆ ಎಂದು ಸುಂದರ ತಿಳಿಸಿದ್ದು, ಇದು ಸುಳ್ಳೆಂದು ಪತ್ತೆಹಚ್ಚಲಾಗಿದೆ. ಫೆÇೀನ್ ಇನ್ನೂ ಬಳಕೆಯಲ್ಲಿದೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. . ಈ ಫೆÇೀನ್ ನ್ನು ಪರಿಶೀಲನೆಗಾಗಿ ಒಂದು ವಾರದಲ್ಲಿ ಹಾಜರುಪಡಿಸಲು ಸೂಚಿಸಲಾಗಿದೆ.
ನಾಮಪತ್ರ ಹಿಂಪಡೆಯಲು ಸುಂದರ ಅರ್ಜಿ ಬರೆಯಲುÀ ಕಾಸರಗೋಡಿನ ಖಾಸಗಿ ಹೋಟೆಲ್ ನಲ್ಲಿ ತಂಗಿರಲಿಲ್ಲ ಎಂದು ಸುರೇಂದ್ರನ್ ತನಿಖೆಯಲ್ಲಿ ತಿಳಿಸಿದ್ದು, ಇದೂ ಸುಳ್ಳೆಂದು ಪತ್ತೆಹಚ್ಚಲಾಗಿದೆ.
ಹೇಳಿಕೆಗಳು ಸುಳ್ಳೆಂದು ಕಂಡುಬಂದಲ್ಲಿ, ಸುರೇಂದ್ರನ್ ಅವರನ್ನು ಮತ್ತೆ ಪ್ರಶ್ನಿಸಲಾಗುವುದೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ತನಿಖಾಧಿಕಾರಿಗಳು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುತ್ತಾರೆ. ಪ್ರಕರಣದ ಏಕೈಕ ಆರೋಪಿ ಸುರೇಂದ್ರನ್ ಆಗಿದ್ದಾರೆ. ಐಪಿಸಿ ಸೆಕ್ಷನ್ 171 ಬಿ ಇ ಕಾಯ್ದೆಯಡಿಯಲ್ಲಿ ಚುನಾವಣೆಯನ್ನು ಬುಡಮೇಲುಗೊಳಿಸಿರುವ ಮತ್ತು ಲಂಚನೀಡುವಿಕೆ, ಬೆದರಿಸುವಿಕೆ ಕ್ರಿಮಿನಲ್ ಖಟ್ಲೆಯನ್ನು ಸುರೇಂದ್ರನ್ ವಿರುದ್ದ ಹೇರಲಾಗಿದೆ.