ಬದಿಯಡ್ಕ: ಇತಿಹಾಸದ ಕುರಿತು ಸಾಹಿತ್ಯ ರಚಿಸಿ ಅಧ್ಯಯನ ನಡೆಸಿ ಕ್ಯಾಲಿಕಟ್ ವಿಶ್ವವಿದ್ಯಾಲಯ ವಿದ್ಯಾನಿಲಯದಿಂದ ರ್ಯಾಂಕ್ ಪಡೆದ ಮೊಮ್ಮದ್ ಸುವೈದ್ ಬದಿಯಡ್ಕ ಇವರಿಗೆ ಬದಿಯಡ್ಕ ಮಂಡಲ ಯೂತ್ ಕಾಂಗ್ರೆಸ್ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಕಾಂಗ್ರೆಸ್ ಅಧ್ಯಾಪಕ ಸಂಘಟನೆ ನೇತಾರ ನಿರಂಜನ್ ರೈ ಪೆರಡಾಲ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು, ಬದಿಯಡ್ಕ ಮಂಡಲ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಪಯ್ಯಲಾಡ್ಕ, ಬದಿಯಡ್ಕ ಮಂಡಲ ಕಾಂಗ್ರೆಸ್ ಕಾರ್ಯದರ್ಶಿ ಶಾಫಿ ಗೊಳಿಯಡಿ,ಯೂತ್ ಕಾಂಗ್ರೆಸ್ ನೇತಾರ ಉದಯ ಕುಂಟಾಲ್ ಮೂಲೆ ಉಪಸ್ಥಿತರಿದ್ದರು.