ಕೊಚ್ಚಿ: ಸಂಸದ ಸುರೇಶ್ ಗೋಪಿ ಅವರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಿಂದ ಕೈ ಕತ್ತರಿಸಲ್ಪಟ್ಟ ಪ್ರೊಫೆಸರ್ ಟಿಜೆ ಜೋಸೆಫ್ ಅವರನ್ನು ಭೇಟಿ ಮಾಡಿದರು. ಅವರು ಜೋಸೆಫ್ ಅವರನ್ನು ಮೂವಾಟ್ಟುಪುಳದಲ್ಲಿರುವ ಅವರ ಮನೆಯಲ್ಲಿ ಭೇಟಿಯಾದರು. ಜೋಸೆಫ್ ಪ್ರತಿಕ್ರಿಯಿಸಿದ್ದು, ಸಂಸದರ ಭೇಟಿ ಕೇವಲ ಸ್ನೇಹದ್ದಾಗಿತ್ತು. ತಮ್ಮ ಜೀವನದಲ್ಲಿ ಅನೇಕ ಒಳ್ಳೆಯ ಕೆಲಸಗಳು ಆಗಲಿ ಎಂದು ಹಾರೈಸಿ ಮರಳಿದರು ಎಂದು ತಿಳಿಸಿದರು.
2010 ರ ಜುಲೈ 4 ರಂದು, ನ್ಯೂಮನ್ ಕಾಲೇಜಿನಲ್ಲಿ ಮಲಯಾಳಂ ಶಿಕ್ಷಕರಾಗಿದ್ದ ಟಿಜೆ ಜೋಸೆಫ್ ಅವರು ಮತ ದೋಷಣೆಗೈದರು ಎಂದು ಆರೋಪಿಸಿ ಮತೀಯ ತೀವ್ರವಾದಿಗಳಿಂದ ಘಾಸಿಗೊಳಗಾಗಿದ್ದರು. ಬಳಿಕ ಅವರು ತನ್ನ ಕೆಲಸವನ್ನು ಕಳೆದುಕೊಂಡರು. ನಂತರ ಹೆಚ್ಚಿನ ತನಿಖೆ ಮತ್ತು ಶಿಕ್ಷೆಗಾಗಿ ಪ್ರಕರಣವನ್ನು ಎನ್‍ಐಎಗೆ ವರ್ಗಾಯಿಸಲಾಯಿತು. ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಶಿಕ್ಷೆಗೊಳಗಾಗಿದ್ದಾರೆ.
ಜೋಸೆಫ್ ಅವರ ಅನುಭವವು ರಾಜ್ಯದ ಧಾರ್ಮಿಕ ಭಯೋತ್ಪಾದನೆಯ ಅತ್ಯಂತ ಭಯಾನಕ ಘಟನೆಯಾಗಿದೆ. ನಾರ್ಕೋಟಿಕ್ ಜಿಹಾದ್ ವಿವಾದದ ಸಮಯದಲ್ಲಿ ಜೋಸೆಫ್ ಅವರ ಅನುಭವವನ್ನು ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಇದೇ ವೇಳೆ, ಸುರೇಶ್ ಗೋಪಿ ಮತ್ತು ಜೋಸೆಫ್ ಅವರ ಭೇಟಿ ಮಹತ್ವ ಪಡೆದಿದ್ದು, ಕೇರಳದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಬಲಗೊಂಡಿದೆ.