HEALTH TIPS

ಕೇರಳದಲ್ಲಿ ರಾತ್ರಿ ಗಸ್ತು ಬಲಪಡಿಸಲು ಪೋಲೀಸರಿಗೆ ನಿರ್ದೇಶನ: ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ಡಿಜಿಪಿ ನಿರ್ದೇಶನ

                    ತಿರುವನಂತಪುರಂ: ಕಾನೂನು ಸುವ್ಯವಸ್ಥೆ ಕಾಪಾಡಲು, ಅಕ್ರಮಗಳ ಪತ್ತೆ ಮತ್ತು ಅಪರಾಧಗಳನ್ನು ತಡೆಗಟ್ಟಲು ರಾಜ್ಯದಲ್ಲಿ ರಾತ್ರಿ ಗಸ್ತು ಬಲಪಡಿಸಲಾಗುವುದು. ಈ ಸಂಬಂಧ ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.

                        ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಪ್ರಮುಖ ಜಂಕ್ಷನ್‍ಗಳು, ಅಡ್ಡ ರಸ್ತೆಗಳು, ಎಟಿಎಂ ಕೌಂಟರ್‍ಗಳು ಮತ್ತು ಆರಾಧನಾಲಯಗಳ ಸುತ್ತುಮುತ್ತ  ರಾತ್ರಿ ಗಸ್ತು ಬಿಗಿಗೊಳಿಸಲಾಗುವುದು. ಬೀಟ್ ಪೆಟ್ರೋಲ್, ನೈಟ್ ಪೆಟ್ರೋಲ್ ಮತ್ತು ಬೈಕ್ ಪೆಟ್ರೋಲ್ ತಂಡಗಳನ್ನು ಕೂಡ ಈ ಉದ್ದೇಶಕ್ಕಾಗಿ ನಿಯೋಜಿಸಲಾಗಿದೆ. ರಾಜ್ಯ ಪೋಲೀಸ್ ಮುಖ್ಯಸ್ಥರು ಈ ಉದ್ದೇಶಕ್ಕಾಗಿ ಹೆದ್ದಾರಿ ಗಸ್ತು ವಾಹನಗಳನ್ನು ಮತ್ತು ಕಂಟ್ರೋಲ್ ರೂಂ ವಾಹನಗಳನ್ನು ಬಳಸುವಂತೆ ಸೂಚಿಸಿದರು.

                    ಸಬ್ ಇನ್ಸ್‍ಪೆಕ್ಟರ್‍ಗಳು ಪರ್ಯಾಯ ದಿನಗಳಲ್ಲಿ ರಾತ್ರಿ ಗಸ್ತು ನಡೆಸುತ್ತಾರೆ. ಇನ್ಸ್‍ಪೆಕ್ಟರ್‍ಗಳು ಮತ್ತು ಉಪವಿಭಾಗದ ಪೋಲೀಸ್ ಅಧಿಕಾರಿಗಳನ್ನು ಗಸ್ತು ಪರಿಶೀಲಿಸಲು ನಿಯೋಜಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries