HEALTH TIPS

ಕೇರಳ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ರ್ಯಾಂಕ್ ಪಟ್ಟಿ ಶೀಘ್ರದಲ್ಲಿ: ಅಂಕಗಳನ್ನು ಅಪ್‍ಲೋಡ್ ಮಾಡಲು ದಿನಾಂಕ ಬಿಡುಗಡೆ

                                          

                  ತಿರುವನಂತಪುರಂ: ಕೇರಳ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಯಾರ್ಂಕ್ ನಿರ್ಣಯಕ್ಕಾಗಿ ಪರಿಗಣಿಸಬೇಕಾದ ಅರ್ಹತಾ ಅಂಕಗಳನ್ನು ಅಪೆÇ್ಲೀಡ್ ಮಾಡುವ ದಿನಾಂಕವನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 17 ರಂದು ಸಂಜೆ 5 ಗಂಟೆಯವರೆಗೆ ವಿದ್ಯಾರ್ಥಿಗಳು ಅಂಕಗಳನ್ನು ಅಪೆÇ್ಲೀಡ್ ಮಾಡಬಹುದು.

             ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಪೆÇ್ಲೀಡ್ ಮಾಡಬೇಕಾಗುತ್ತದೆ. ಪ್ರವೇಶ ಪರೀಕ್ಷೆಯ ಅಂಕಗಳೊಂದಿಗೆ ಈ ಅಂಕಗಳನ್ನು ಪರಿಗಣಿಸಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಶ್ರೇಣಿಯನ್ನು ತಯಾರಿಸಲಾಗುತ್ತದೆ.

                 ಪ್ಲಸ್ ಟು ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಪಡೆದ ಅಂಕಗಳನ್ನು ನೀಡಲಾಗುವುದು. ಇದನ್ನು http://cee.kerala.gov.in ವೆಬ್‍ಸೈಟ್ ಮೂಲಕ ಅಪ್‍ಲೋಡ್ ಮಾಡಬಹುದು. ಸೂಚನೆಗಳ ಪ್ರಕಾರ ಅಂಕಗಳನ್ನು ಸಲ್ಲಿಸಿದ ನಂತರ, ದೃಢೀಕರಣ ವರದಿಯನ್ನು ಮುದ್ರಿಸಿ ಇಟ್ಟುಕೊಳ್ಳಬೇಕು.

                      ಕೇರಳ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (kem) ಕಳೆದ ತಿಂಗಳು 5 ರಂದು ನಡೆಯಿತು. ಇದೇ ವೇಳೆ, ಪರೀಕ್ಷೆಯ ರ್ಯಾಂಕ್  ಪಟ್ಟಿಯನ್ನು ಹೈಕೋರ್ಟ್ ಅನುಮತಿಯೊಂದಿಗೆ ಮಾತ್ರ ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries