ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾರತದ ಇತ್ತೀಚಿನ ಹೈವೇ ಯೋಜನೆಗಳಲ್ಲಿ ಚೀನಾದ ಕಂಪನಿಗಳು ಹಣ ಹೂಡಿಲ್ಲ ಎಂದು ತಿಳಿಸಿದ್ದಾರೆ.
ಜುಲೈ 2020ರಲ್ಲಿ ಚೀನಾ ಜೊತೆ ಗಡಿ ಸಂಘರ್ಷ ಏರ್ಪಟ್ಟಾಗ ಭಾರತ, ಇನ್ನುಮುಂದೆ ತನ್ನ ನೆಲದಲ್ಲಿ ಚೀನಾ ಸಂಸ್ಥೆಗಳು ಹೂಡಿಕೆ ಮಾಡಲು ಬಿಡುವುದಿಲ್ಲ ಎನ್ನುವ ನಿರ್ಧಾರ ತಳೆದಿತ್ತು.
ಅಲ್ಲದೆ ಚೀನಾದ ಕಂಪನಿಗಳು ಭಾರತದ ಹೈವೇ ಪ್ರಾಜೆಕ್ಟುಗಳಲ್ಲಿ ಹಣ ಹೂಡಿಕೆ ಮಾಡಲು ನಿರ್ಬಂಧ ವಿಧಿಸಿತ್ತು.
ಇತ್ತೀಚಿನ ಸಂದರ್ಶನವೊಂದರಲ್ಲಿ ನಿತಿನ್ ಗಡ್ಕರಿ ಭಾರತ ಆಮದನ್ನು ಕಡಿಮೆ ಮಾಡಿ ರಫ್ತನ್ನು ಹೆಚ್ಚು ಮಾಡುವ ಬಗ್ಗೆ ಒಲವು ತೋರಿದ್ದರು ಎನ್ನುವುದು ಗಮನಾರ್ಹ.