ತಿರುವನಂತಪುರಂ: ರಾಜ್ಯ ಸರ್ಕಾರ ತಿರುವನಂತಪುರಂ, ಪಾಲಕ್ಕಾಡ್, ಕೋಎiಕ್ಕೋಡ್, ಮಲಪ್ಪುರಂ, ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪ್ಲಸ್ ಒನ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಎಲ್ಲಾ ವಿಭಾಗಗಳಿಗೂ (ಹ್ಯುಮಾನಿಟೀಸ್, ಕಾಮರ್ಸ್ ಮತ್ತು ವಿಜ್ಞಾನ) ಶೇಕಡಾ 20 ರಷ್ಟು ಸೀಟುಗಳು ಏರಿಕೆಯಾಗಲಿದೆ. ರಾಜ್ಯದಲ್ಲಿ ಪ್ಲಸ್ ಒನ್ ಪ್ರವೇಶ ಪ್ರಕ್ರಿಯೆ ಆರಂಭವಾಗುವ ಕೆಲವೇ ದಿನಗಳ ಮೊದಲು ಈ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ.
ಕಳೆದ ವರ್ಷ, ಸೀಟುಗಳ ಕೊರತೆಯಿಂದಾಗಿ ಸುಮಾರು 75,000 ವಿದ್ಯಾರ್ಥಿಗಳು ಓಪನ್ ಶಾಲೆಗಳನ್ನು ಅವಲಂಬಿಸಬೇಕಾಯಿತು. ಕಾಸರಗೋಡು ಸಹಿತ ಉತ್ತರದ ಜಿಲ್ಲೆಗಳಲ್ಲಿ ಸಾವಿರಾರು ಸೀಟುಗಳ ಕೊರತೆಯಿದೆ. ಪೂರ್ಣ ಎ+ ಪಡೆದವರೂ ಇಷ್ಟಪಡುವ ವಿಷಯದಲಿ ಸೀಟು ಲಭಿಸಲು ಅನಿಶ್ಚಿತತೆಗಳು ಎದುರಾಗುತ್ತಿತ್ತು.