ನವದೆಹಲಿ: ಚೀನಾ ಅತಿಕ್ರಮಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಡವಳಿಕೆ ಹೇಗಿದೆ ಎಂಬುದನ್ನು ಮೀಮ್ ಮೂಲಕ ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ಪ್ರಧಾನಿ ಮೋದಿ ಅವರ ಭಾಷಣದ 'ಹಮ್ ಘರ್ ಮೈ ಗುಸ್ ಕೆ ಮಾರೆಂಗೆ' ಹೇಳಿಕೆಯನ್ನು ಮೀಮ್ ವಸ್ತುವಾಗಿ ಬಳಸಿರುವ ಕಾಂಗ್ರೆಸ್, ಚೀನಾ ಸೈನಿಕರು ಅತಿಕ್ರಮಣ ನಡೆಸಿದಾಗ ಪ್ರಧಾನಿಗಳು ಕೋಣೆಯೊಳಗೆ ಅಡಗಿಕೊಳ್ಳುತ್ತಾರೆ ಎಂದು ಅಣಕವಾಡಿದೆ.
'ಹೆದರಬೇಡಿ ಪ್ರಧಾನಿ ಮೋದಿ, ರಾಷ್ಟ್ರ ನಿಮ್ಮ ಜೊತೆ ಇದೆ' ಎಂದು ಮೀಮ್‌ನಲ್ಲಿ ಹೇಳಿರುವ ಕಾಂಗ್ರೆಸ್, ಭಾರತದ ಗಡಿ ಅಪಾಯದಲ್ಲಿದೆ ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಟ್ವೀಟ್ ಮಾಡಿದೆ.
ಉತ್ತರಾಖಂಡದಲ್ಲಿ ಚೀನಾ 5 ಕಿ.ಮೀ. ಒಳಪ್ರವೇಶಿಸಿದೆ. ಅಲ್ಲಿನ ಸೇತುವೆಯೊಂದನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ನಾಶ ಮಾಡಿ, ಅಲ್ಲಿಂದ ಕಾಲ್ಕಿತ್ತಿದೆ. '56 ಇಂಚಿನ ಎದೆ'ಗೆ ಏನಾಯಿತು? 'ಕೆಂಪು ಕಣ್ಣು'ಗಳಿಗೆ ಏನಾಯಿತು? 'ಪ್ರಬಲ ನಾಯಕತ್ವ'ಕ್ಕೆ ಏನಾಯಿತು? ಮೋದಿ ಇದೆಲ್ಲದಕ್ಕೂ ಉತ್ತರಿಸಬೇಕು ಎಂದಿದೆ.