ಕೊಚ್ಚಿ: ಸಾರ್ವಜನಿಕರೊಂದಿಗೆ ಸಭ್ಯ ಭಾಷೆ ಬಳಸುವಂತೆ ಹೈಕೋರ್ಟ್ ಪೋಲೀಸರಿಗೆ ಸೂಚಿಸಿದೆ. ಇದಕ್ಕಾಗಿ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ಡಿಜಿಪಿಗೆ ನಿರ್ದೇಶನ ನೀಡಿದೆ.
ತ್ರಿಶೂರ್ ಚೆರ್ಪು ಪೋಲೀಸ್ ಠಾಣೆಗೆ ಸಂಬಂಧಿಸಿದ ಪೋಲೀಸ್ ದುರ್ವರ್ತನೆಯ ಪ್ರಕರಣವನ್ನು ಪರಿಗಣಿಸಿ ನ್ಯಾಯಾಲಯ ಈ ಆದೇಶ ನೀಡಿದೆ. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ಪೀಠ ಈ ಆದೇಶ ನೀಡಿದೆ.