ಕಾಸರಗೋಡು: ನಗರಸಭಾ ಕೃಷಿಭವನ ಆವಿಷ್ಕರಿಸಿದ ಸಂಸ್ಥೆಗಳಿಗಿರುವ ತರಕಾರಿ ತೋಟ ಅಭಿವೃದ್ಧಿ ಯೋಜನೆ 2021-22ರ ಉದ್ಘಾಟನೆ ಕಾಸರಗೋಡು ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ ಮುನೀರ್ ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ಹೇಮಲತಾ, ಕೃಷಿ ಯೋಜನೆ ಜಂಟಿ ನಿರ್ದೇಶಕ ಆನಂದನ್, ಕೃಷಿ ಅಧಿಕಾರಿ ಮುರಳಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುರೇಂದ್ರನ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕೆ.ಎ ಯಶೋಧಾ ವಂದಿಸಿದರು.