ಕಾಸರಗೋಡು: ಕಟ್ಟಾ ಇಸ್ಲಾಂ ಮತ್ತು ಕಮ್ಯೂನಿಸ್ಟರು ಸ್ವಾತಂತ್ರ್ಯ ಹೋರಾಟಗಾರನೆಂದು ಹಾಡಿಹೊಗಳುತ್ತಿರುವ ವಾರ್ಯನ್ ಕುನ್ನು ಕುಞಹಮ್ಮದ್‍ಹಾಜಿ ವಿಶ್ವದ ಮೊದಲ ತಾಲಿಬಾನ್ ಆಗಿದ್ದನು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ ಅಬ್ದುಲ್ಲ ಕುಟ್ಟಿ ತಿಳಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಕಾನೂನು ವಿಭಾಗ ವತಿಯಿಂದ '1921ರ ಮಲಬಾರ್ ಹತ್ಯಾಕಾಂಡ-ಸತ್ಯವೂ ಮಿಥ್ಯೆಯೂ'ಎಂಬ ವಿಷಯದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ದೇಶದ ಮುಸ್ಲಿಂಜನತೆ ಜಾಗತಿಕ ಭಯೋತ್ಪಾದನೆಗೆದುರಾಗಿ ಧ್ವನಿಯೆತ್ತುವುದರ ಜತೆಗೆ ರಾಷ್ಟ್ರದೊಂದಿಗೆ ಕೈಜೋಡಿಸಲು ಮುಂದಾಗಬೇಕು ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಕೇಸರಿ ಪತ್ರಿಕೆ ಮುಖ್ಯ ವರದಿಗಾರ ಡಾ. ಎನ್. ಆರ್ ಮಧು, ವಕೀಲರಾದ ಶಂಖು ಟಿ.ದಾಸ್, ಕರುಣಾಕರನ್ ನಂಬ್ಯಾರ್ ವಿಷಯ ಮಂಡಿಸಿದರು.
ಇದೇ ಸಂದರ್ಭ ಭಾರತದ ಸ್ವಾತಂತ್ರುದ 75ನೇ ವಾರ್ಷಿಕ ಅಂಗವಾಗಿ ನಡೆಯಲಿರುವ ವರ್ಷಪೂರ್ತಿ ಕಾರ್ಯಕ್ರಮದನ್ವಯ ನಡೆಯಲಿರುವ ಜಿಲ್ಲಾಮಟ್ಟದ ಈ ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ ಅಬ್ದುಲ್ಲ ಕುಟ್ಟಿ ಉದ್ಘಾಟಿಸಿದರು. ಬಿಜೆಪಿ ಮುಖಂಡರಾದ ವಕೀಲ ಅಂಬಿಕಾ ಸುತನ್, ವಕೀಲ ಎ.ಸದಾನಂದ ರೈ, ಪ್ರಮಿಳಾ ಸಿ,ನಾಯ್ಕ್ ಉಪಸ್ಥಿತರಿದ್ದರು. ಬಿಜೆಪಿ ಕಾನೂನು ವಿಭಾಗ ಕನ್ವೀನರ್ ವಕೀಲ ಅನಂತರಾಮ್ ಸ್ವಾಗತಿಸಿದರು. ವಕೀಲ ಸುರೇಶ್ ಕೆ.ಪಿ ವಂದಿಸಿದರು.