HEALTH TIPS

ಕುಬಣೂರು ಸೇತುವೆ ಕುಸಿತದ ಹಂತದಲ್ಲಿ: ಸಂಚಾರ ಮೊಟಕು ಸಾಧ್ಯತೆ

                       ಉಪ್ಪಳ: ಕುಬಣೂರು ಸುವರ್ಣಗಿರಿ ಹೊಳೆಗೆ ನಿರ್ಮಿಸಿದ್ದ ಹಳೆಯ ಸೇತುವೆಯೊಂದು ಕುಸಿಯುವ ಭೀತಿ ಎದುರಿಸುತ್ತಿದೆ. ಈ ಸೇತುವೆ ಕುಸಿದ ಬಿದ್ದರೆ ಸಂಚಾರ ಸಂಪೂರ್ಣ ಮೊಟಕುಗೊಳ್ಳಲಿದೆ. ಕಳೆದ ಕೆಲವು ದಿನಗಳ ಹಿಂದೆ ಸೇತುವೆಯ ಸಮೀಪದ ಮರವೊಂದು ಬಿದ್ದು ಒಂದು ಕಂಬ ಕುಸಿದಿದೆ. ಕಂಬದ ಶಿಥಿಲತೆಯ ಕಾರಣ ಸಂಪೂರ್ಣ ಸೇತುವೆ ಯಾವ ಕ್ಷಣದಲ್ಲೂ ಕುಸಿಯುವ ಸಾಧ್ಯತೆ ಹೆಚ್ಚಿದೆ. 


              ಪ್ರಸ್ತುತ ದ್ವಿಚಕ್ರ ವಾಹನಗಳಷ್ಟೇ ಈ ಸೇತುವೆ ಮೂಲಕ ಸಂಚರಿಸುತ್ತಿದ್ದು, ಸೇತುವೆ ಕುಸಿದರೆ ಸಂಚಾರ ಮೊಟಕುಗೊಳ್ಳಲಿದೆ. ಈ ಸೇತುವೆಯ ಅಡಿಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳೂ ಸಂಗ್ರಹಗೊಂಡಿದ್ದು, ನೀರು ಸರಾಗವಾಗಿ ಹರಿಯದೆ ಸೇತುವೆ ಕಂಬಕ್ಕೆ ಒತ್ತಡ ಬೀಳುತ್ತಿದ್ದು ಕುಸಿಯಲು ಇದೂ ಕಾರಣವಾಗಲಿದೆ. 

               ಸೇತುವೆ ಅಪಾಯದಲ್ಲಿರುವ ಬಗ್ಗೆ ಸೇತುವೆ ಸನಿಹ ತಲಪದೆ ತಿಳಿಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೇತುವೆಯ ಶಿಥಿಲತೆ, ಅಪಾಯಕಾರಿ ಸ್ಥಿತಿಯ ಬಗ್ಗೆ ತಿಳಿಯದ ಪ್ರಯಾಣಿಕರು ಸೇತುವೆ ಸನಿಹ ತಲಪದೆ ತಿಳಿಯುತ್ತಿಲ್ಲ. ಇದರಿಂದ ಹೊಸಬರಿಗೆ ಮರಳಿ ಹಿಂತೆರಳಬೇಕಾದ ಸ್ಥಿತಿಯೂ ಇದೆ.ಆದ್ದರಿಂದ ಈ ಸೇತುವೆಯ ಶಿಥಿಲತೆಯ ಬಗ್ಗೆ ಸೂಚನೆ ನೀಡಲು ಶಾಂತಿಗುಡಿ ಮತ್ತು ಕುಬಣೂರಲ್ಲಿ ಸಂಚಾರ ನಿಷೇಧದ ಸೂಚನಾ ಫಲಕ ಸ್ಥಾಪಿಸುವ ತುರ್ತು ಇದೆ. ಸೇತುವೆ ಸಂಪರ್ಕದ ರಸ್ತೆಯೂ ಶೋಚನೀಯವಾಗಿದೆ. ಸೇತುವೆ ಸಂಪೂರ್ಣ ಕುಸಿಯುವ ಮೊದಲು ದುರಸ್ಥಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries