ನವದೆಹಲಿ: ಸರ್ಕಾರ ಮ್ಯಾನ್ಮಾರ್ ನಿರಾಶ್ರಿತರ ಬಗ್ಗೆ ನಿರಂತರವಾಗಿ ಆತಂಕ ವ್ಯಕ್ತಪಡಿಸುತ್ತಾ ಬಂದಿದೆ. ಆದರೆ ದೇಶದ ಭದ್ರತೆಗೆ ಮ್ಯಾನ್ಮಾರ್ ನ ನಿರಾಶ್ರಿತರು ಅಪಾಯ ಎಂಬ ಸರ್ಕಾರದ ಆತಂಕವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ಅಂಕಿ-ಅಂಶಗಳು ಬೆಂಬಲಿಸುತ್ತಿಲ್ಲ.
2020 ರ ಎನ್ ಸಿಆರ್ ಬಿ ವರದಿಯ ವಿಶ್ಲೇಷಣೆಯ ಪ್ರಕಾರ ಭಾರತದಲ್ಲಿ ವಿದೇಶಿ ಪ್ರಜೆಗಳು ಮಾಡುವ ಅಪರಾಧಗಳ ಪೈಕಿ ಶೇ.2 ಮ್ಯಾನ್ಮಾರ್ ಪ್ರಜೆಗಳ ಅಪರಾಧವಾಗಿರುತ್ತದೆ ಎಂದು ಹೇಳಿದೆ.
ಭಯೋತ್ಪಾದನೆ, ಅತ್ಯಾಚಾರ, ಶಸ್ತ್ರಗಳನ್ನಿಟ್ಟುಕೊಳ್ಳುವುದು ಮುಂತಾದ ಅಪರಾಧ ಪ್ರಕರಾಣಗಳು 2020 ರಲ್ಲಿ ಮ್ಯಾನ್ಮಾರ್ ಪ್ರಜೆಗಳ ವಿರುದ್ಧ ದಾಖಲಾಗಿಲ್ಲ ಎಂಬ ಮಾಹಿತಿ ಎನ್ ಸಿಆರ್ ಬಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಮ್ಯಾನ್ಮಾರ್ ನಿರಾಶ್ರಿತರು ಎಸಗುವ ಅಪರಾಧ ಕೃತ್ಯಗಳಿಗಿಂತಲೂ ಬಾಂಗ್ಲಾದೇಶ, ನೈಜೀರಿಯಾ, ನೇಪಾಳದ ಪ್ರಜೆಗಳು ಭಾರತದಲ್ಲಿ ಎಸಗುವ ಅಪರಾಧ ಕೃತ್ಯಗಳು ಹೆಚ್ಚಾಗಿರಲಿದೆ ಎಂದು ಎನ್ ಸಿಆರ್ ಬಿ ವರದಿ ತಿಳಿಸಿದೆ.
2020 ರಲ್ಲಿ ಭಾರತದಲ್ಲಿ ಒಟ್ಟಾರೆ 7686 ವಿದೇಶಿ ಪ್ರಜೆಗಳು ಎಸಗಿದ ಅಪರಾಧ ಕೃತ್ಯಗಳನ್ನು ಎಸಗಿದ್ದಾರೆ. ಈ ಪೈಕಿ ಅತಿ ಹೆಚ್ಚು ಮಂದಿ ಬಾಂಗ್ಲಾದೇಶಿಗರಾಗಿದ್ದು, (ಶೇ.25.4) ನೈಜೀರಿಯಾ (ಶೇ.5.5) ನೇಪಾಳ (ಶೇ.3.3) ಹಾಗೂ ಮ್ಯಾನ್ಮಾರ್ ನ ಮಂದಿ ಶೇ.2.3 ರಷ್ಟು ಇದ್ದಾರೆ ಎಂದು ವರದಿಯ ಮೂಲಕ ತಿಳಿದುಬಂದಿದೆ.
2019 ಕ್ಕೆ ಹೋಲಿಕೆ ಮಾಡಿದರೆ 2020 ರಲ್ಲಿ ವಿದೇಶಿಗರು ಎಸಗಿರುವ ಅಪರಾಧ ಕೃತ್ಯಗಳಲ್ಲಿ ಇಳಿಕೆ ಕಂಡುಬಂದಿದ್ದು ಕೋವಿಡ್-19 ಲಾಕ್ ಡೌನ್ ಹಾಗೂ ನಿರ್ಬಂಧಗಳು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.