ಕಾಸರಗೋಡು: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯ ವ್ರತಾಚರಣೆಯ ಸವಿ ನೆನಪಿಗೆ ಚಾತುರ್ಮಾಸ್ಯ ವ್ರತಾಚರಣೆ ಸಮಿತಿಯ ಸಹಯೋಗದೊಂದಿಗೆ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ನೇತೃತ್ವದಲ್ಲಿ ಇಂದು(ಬುಧವಾರ) ಶ್ರೀಮಠದಲ್ಲಿ ಕಾವ್ಯಾಂಜಲಿ ಸಾಹಿತ್ತಿಕ ಕಾರ್ಯಕ್ರಮ ಬೆಳಿಗ್ಗೆ ಇದೀಗ 10.30 ರಿಂದ ಆರಂಭಗೊಳ್ಳಲಿದೆ.
ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾರಂಭವನ್ನು ಹಿರಿಯ ಕವಿ, ಮಂಗಳೂರು ಆಕಾಶವಾಣಿ ನಿಲಯದ ನಿವೃತ್ತ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ಉದ್ಘಾಟಿಸಿವರು. ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್.ಮೂಡಿತ್ತಾಯ ಅಧ್ಯಕ್ಷತೆ ವಹಿಸುವರು. ಕವಿಗಳಾದ ಡಾ.ಯು.ಮಹೇಶ್ವರಿ, ರಾಧಾಕೃಷ್ಣ ಕೆ ಉಳಿಯತ್ತಡ್ಕ, ಪ್ರಸನ್ನ ವಿ.ಚೆಕ್ಕೆಮನೆ, ಬಾಲಕೃಷ್ಣ ಬೇರಿಕೆ, ವೆಂಕಟ್ ಭಟ್ ಎಡನೀರು, ಪ್ರಭಾವತಿ ಕೆದಿಲಾಯ ಪುಂಡೂರು, ಪದ್ಮಾವತಿ ವೈ, ಡಾ.ರಾಧಾಕೃಷ್ಣ ಬೆಳ್ಳೂರು, ವಿಜಯಲಕ್ಷ್ಮೀ ಶಾನುಭೋಗ್, ಪ್ರಮೀಳಾ ಚುಳ್ಳಿಕ್ಕಾನ, ಅರ್ಥಾ ಪೆರ್ಲ, ಸುಂದರ ಬಾರಡ್ಕ ಕವಿತೆಗಳನ್ನು ವಾಚಿಸುವರು.
ಹಿರಿಯ ವೈದ್ಯ, ಸಾಹಿತಿ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಮಂಜೇಶ್ವರ ಸಮಾರೋಪ ಭಾಷಣ ಮಾಡುವರು. ಕಾರ್ಯಕ್ರಮದ ನೇರ ಪ್ರಸಾರವನ್ನು ಸಮರಸ ಸುದ್ದಿಯಲ್ಲಿ ವೀಕ್ಷಿಸಬಹುದು.