ವಾಷಿಂಗ್ಟನ್: ಭಾರತವು ವಿಶ್ವ ಸಂಸ್ಥೆಯ ಭದ್ರತಾ ಸಮಿತಿ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ.
ಅಧ್ಯಕ್ಷತೆಯನ್ನು ಹಲವು ಸಫಲ ಫಲಿತಾಂಶಗಳೊಂದಿಗೆ ಯಶಸ್ವಿಗೊಳಿಸಲು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳು ಎಂದುತಿರುಮೂರ್ತಿ ಟ್ವೀಟ್ ಮಾಡಿದ್ದಾರೆ.
ಜನವರಿ 1, 2021ರಿಂದ ಡಿಸೆಂಬರ್ 31, 2022ರವರೆಗೆ ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಈ ಎರಡು ವರ್ಷದ ಈ ಸದಸ್ಯತ್ವದ ಅವಧಿಯಲ್ಲಿ ಮೊದಲ ಬಾರಿಗೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಭಾರತ ಆ.1 ರಿಂದ ಒಂದು ತಿಂಗಳ ಕಾಲ ವಹಿಸಿಕೊಳ್ಳಲಿದೆ. 2022ರ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಭಾರತಕ್ಕೆ ದೊರೆಯಲಿದೆ.
'ಭಾರತದ ದೇಶವು ತನ್ನ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಸಮಯದಲ್ಲೇ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಬಹಳ ಹೆಮ್ಮೆ ತಂದಿದೆ. ಭಾರತವು ಎಂದಿನಂತೆ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದೆನಯ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
8ನೇ ಬಾರಿಗೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರ ಭಾರತ ಆಗಿದೆ. 2 ವರ್ಷದ ಈ ಅವಧಿಯಲ್ಲಿ ಭಾರತಕ್ಕೆ ಎರಡು ಬಾರಿ ಅಧ್ಯಕ್ಷ ಸ್ಥಾನ ದೊರೆಯಲಿದೆ. 2021ರ ಆಗಸ್ಟ್ ಮತ್ತು 2022ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಅಧ್ಯಕ್ಷ ಸ್ಥಾನ ದೊರೆತಿತ್ತು.
ಭದ್ರತಾ ಮಂಡಳಿಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 15( ಖಾಯಂ 5 ರಾಷ್ಟ್ರಗಳು+ಖಾಯಂ ಅಲ್ಲದ 10 ರಾಷ್ಟ್ರಗಳು) ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ ದೇಶಗಳು ಖಾಯಂ ಸದಸ್ಯರಾಷ್ಟ್ರಗಳಾಗಿವೆ.
ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳನ್ನು ವಿಶ್ವಸಂಸ್ಥೆಯ ಸಾಮಾನ್ಯಸಭೆ 02 ವರ್ಷಗಳ ಕಾಲಾವಧಿಗೆ ಚುನಾಯಿಸುತ್ತದೆ. 2021 ಜನವರಿ 1 ರಿಂದ 2022 ಡಿಸೆಂಬರ್ 31ರವರೆಗಿನ ಎರಡು ವರ್ಷಗಳ ಅವಧಿಗೆ ಏಷ್ಯಾ ಫೆಸಿಪಿಕ್ ಪ್ರದೇಶದಿಂದ ಭಾರತವು ವಿಶ್ವಸಂಸ್ಥೆಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುತ್ತದೆ.
1950-51ರಲ್ಲಿ ಭಾರತವು ಭದ್ರತಾ ಮಂಡಳಿಯ ತಾತ್ಕಾಲಿಕ ಅವಧಿಯ ಸದಸ್ಯತ್ವವನ್ನು ಮೊದಲ ಬಾರಿಗೆ ಪಡೆದುಕೊಂಡಿತ್ತು. 2021-22ನೇ ಅವಧಿಯು ಸೇರಿದರೆ ಭಾರತವು ಒಟ್ಟು 08 ಬಾರಿ ಈ ತಾತ್ಕಾಲಿಕ ಅವಧಿಯ ಸದಸ್ಯತ್ವವನ್ನು ಹೊಂದಿದ ಹಾಗೆ ಆಗುತ್ತದೆ.
ಅಂತಾರಾಷ್ಟ್ರೀಯ ಶಾಂತಿ ಸುಭದ್ರತೆಯ ಅಡಿಪಾಯಗಳು ಅಲುಗಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಈ ಸದಸ್ಯತ್ವ ಜಾಗತಿಕವಾಗಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಗಮನಿಸಬೇಕಾಗಿರುವ ಪ್ರಮುಖವಾದ ಅಂಶವೆಂದರೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಭಾರತದ ಈ ಉಮೇದುವಾರಿಕೆಯನ್ನು ಬೆಂಬಲಿಸುವುದರ ಹಿಂದೆ ತಂತ್ರವಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ವೀಟೋ ಅಧಿಕಾರ ಚಲಾಯಿಸುವಲ್ಲಿ ಲೋಪ, ಜಾಗತಿಕ ಆಡಳಿತಾತ್ಮಕ ನಿರ್ಧಾರಗಳಲ್ಲಿ ಎಡವಿರುವುದು, ನೀತಿ-ನಿಯಮ ರೂಪಿಸುವಲ್ಲಿ ಪಾರದರ್ಶಕತೆ ಇಲ್ಲದಿರುವುದು ಹಾಗೂ ಆಂತರಿಕ ಪ್ರಜಾಪ್ರಭುತ್ವವಿಲ್ಲದಿರುವುದು ಹೀಗೆ ಹಲವಾರು ದೋಷಾರೋಪಗಳು ಭದ್ರತಾ ಮಂಡಳಿ ಮೇಲಿದೆ.