ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾರತೀಯ ಚಿಕಿತ್ಸಾ ಇಲಾಖೆ ಮುಕಾಂತರ ಜಾರಿಗೊಳಿಸುವ ವಯೋ ಅಮೃತಂ ಯೋಜನೆಯ ವೈದ್ಯಾಧಿಕಾರಿ, ಅಟೆಂಡರ್ ಹುದ್ದೆಗಳಲ್ಲಿ ದಿನವೇತನ ಪ್ರಕಾರದ ನೇಮಕಾತಿ ನಡೆಸಲಾಗುವುದು. ಈ ಸಂಬಂಧ ಸೆ.15ರಂದು ಬೆಳಗ್ಗೆ 10.30ಕ್ಕೆ ಕಾಞಂಗಾಡು ಮಿನಿ ಸಿವಿಲ್ ಸ್ಟೇಷನ್ ನ ಐ.ಎಸ್.ಎಂ. ಜಿಲ್ಲಾ ವೈದ್ಯಾಧಿಕಾರಿ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಬಿ.ಎ.ಎಂ.ಎಸ್. ಅರ್ಹತೆಯಿರುವ ಮಂದಿ ವೈದ್ಯಾಧಿಕಾರಿ ಹುದ್ದೆಗೆ, 7 ನೇ ತರಗತಿಗಿಂತ ಕಡಿಮೆಯಿಲ್ಲದ ಶಿಕ್ಷಣಾರ್ಹತೆ ಹೊಂದಿರುವ ಮಂದಿ ಅಟೆಂಡರ್ ಹುದ್ದೆಗೆ ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸುವ ಮಂದಿ 18ರಿಂದ 50 ವರ್ಷದ ನಡುವಿನ ವಯೋಮಾನದವರಾಗಿರಬೇಕು. ದೂರವಾಣಿ ಸಂಖ್ಯೆ: 04672205710.