ಕಾಸರಗೋಡು: ಕಾಸರಗೋಡು ಅಗ್ರಿ ಹಾರ್ಟಿ ಸೊಸೈಟಿ ನೀಡುವ ಉದ್ಯಾನ ರತ್ನ, ಪೆÇೀಷಕಶ್ರೀ, ಕಿಸಾನ್ ಜ್ಯೋತಿ, ಹರಿತ ದೃಶ್ಯ ಎಂಬ ಪ್ರಶ್ತಿಗೆ ಭಾಜನರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಅತ್ಯುತ್ತಮ ತರಕಾರಿ ಕೃಷಿ ನಡೆಸಿದವರಿಗೆ ನೀಡಲಾಗುವ "ಹರಿತಶ್ರೀ" ಪ್ರಶಸ್ತಿಗೆ ಶಿವಾನಂದ ಪೇರಾಲ್, ಪಿ.ವಿ.ಭಾಸ್ಕರನ್ ಪುದಿಯವೀಟಿಲ್, ಟಿ.ರಾಘವನ್ ಕಮಲಮೂಲೆ ಯಥಾಕ್ರಮ ಪ್ರಥಮ,ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.
ಅತ್ಯುತ್ತಮ ಸಂಯೋಜಿತ ಕೃಷಿಕರಿಗೆ ನೀಡಲಾಗುವ "ಕಿಸಾನ್ ಜ್ಯೋತಿ" ಪ್ರಶಶ್ತಿ ವಿಭಾಗದಲ್ಲಿ ಮುಹಮ್ಮದ್ ಶಾಫಿ ಪುದುಕೈ, ವಿ.ಅನಿಲ್ ಕುಮಾರ್ ನಾಲಾಂ ವಾದುಕ್ಕಲ್. ಶ್ರೀನಿವಾಸ ಮಜೆಕ್ಕಾರು ಮುಗು ಪುತ್ತಿಗೆ ಯಥಾ ಕ್ರಮ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು.
ಅತ್ಯುತ್ತಮ ಹೂವಿನ ಕೃಷಿ ನಡೆಸಿದವರಿಗೆ ನೀಡಲಾಗುವ "ಉದ್ಯಾನ ರತ್ನ" ಪ್ರಶಸ್ತಿ ವಿಭಾಗದಲ್ಲಿ ಎ.ಎಂ.ಓಮನಾ ಕಯ್ಯೂರು-ಚೀಮೇನಿ, ವಿಜಯ ಲಕ್ಷ್ಮಿ ಎನ್.ಭಟ್ ಕಲ್ಲಕಟ್ಟ, ಹಸೀನಾ ಮಟ್ಟುಂತಲ ಯಥಾ ಕ್ರಮ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು.
ಅತ್ಯುತ್ತಮ ಕೃಷಿ ಚಿತ್ರಗಳಿಗೆ ನೀಡಲಾಗುವ "ಹರಿತ ದೃಶ್ಯ ಪುರಸ್ಕಾರ" ವಿಭಾಗದಲ್ಲಿ ವಿನಯನ್ ಕುಂಡಂಕುಳಿ, ವಿ.ಕುಂಞಂಣ್ಣಿ ಅದಿಯಾಂಬೂರು ಪೆÇ್ರೀತ್ಸಾಹಕ ಬಹುಮಾನ ಗಳಿಸಿದರು.
ಅಗ್ರಿ ಹಾರ್ಟಿ ಸೊಸೈಟಿಯ ಅಧ್ಯಕ್ಷೆಯಾಗಿರುವ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ , ಕಾರ್ಯದರ್ಶಿಯಾಗಿರುವ ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಅವರು ಜಂಟಿಯಾಗಿ ಬಹುಮಾನ ವಿಜೇತರ ಹೆಸರು ಪ್ರಕಟಿಸಿದ್ದಾರೆ.