HEALTH TIPS

ಕೆನಡಾ ಮಾರುಕಟ್ಟೆಗೆ ಡಾ. ರೆಡ್ಡೀಸ್‌ ಕಂಪನಿಯ ಕ್ಯಾನ್ಸರ್‌ ಔಷಧ ಬಿಡುಗಡೆ

               ಹೈದರಾಬಾದ್‌ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ 'ರೆಡ್ಡಿ-ಲೆನಾಲಿಡೊಮೈಡ್‌' ಔಷಧವನ್ನು ಕೆನಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಹೈದರಾಬಾದ್‌ ಮೂಲದ ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಗುರುವಾರ ಹೇಳಿದೆ.

            ಈಗಾಗಲೇ ಬಳಕೆಯಲ್ಲಿರುವ ಔಷಧ 'ರೆವ್‌ಲಿಮಿಡ್‌'ಗೆ ಸಮಾನವಾದ 'ರೆಡ್ಡಿ-ಲೆನಾಲಿಡೊಮೈಡ್‌'ಗೆ ಅಲ್ಲಿನ ಆರೋಗ್ಯ ಇಲಾಖೆ 'ಹೆಲ್ತ್ ಕೆನಡಾ' ಅನುಮೋದನೆ ನೀಡಿದ ಬೆನ್ನಲ್ಲೇ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

            ಇದು ಕೆನಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿರುವ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ಮೊದಲ ಜೆನೆರಿಕ್‌ ಔಷಧ ಎಂದು ಕಂಪನಿಯ ಕೆನಡಾ ಶಾಖೆಯ ಪ್ರಧಾನ ವ್ಯವಸ್ಥಾಪಕ ವಿನೋದ್ ರಾಮಚಂದ್ರನ್‌ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries