ಕೋಜಿಕ್ಕೋಡ್: ಅವಳಿ ಮಕ್ಕಳನ್ನು ಬಾವಿಗೆಸೆದು ಮಹಿಳೆಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ರಾತ್ರಿ ನಡಾಪುರಂ ಬಳಿಯ ಪೆರೋಡ್ ನಲ್ಲಿ ನಡೆದಿದೆ.
ಮಕ್ಕಳನ್ನು ಬಾವಿಗೆಸೆದು ಮಹಿಳೆಯೂ ಬಾವಿಗೆ ಹಾರಿದ್ದಾಳೆ, ಆದರೆ ಆಕೆಯನ್ನು ಸ್ಥಳೀಯರು ರಕ್ಷಿಸಿದ್ದು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದ್ದು. ಸುಬೀನ್ ತನ್ನ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ, ತನ್ನ ಇಬ್ಬರು ಅವಳಿ ಮಕ್ಕಳಾದ ಫಾತಿಮಾ ಮತ್ತು ಮೊಹಮದ್ ರಿಜ್ವಿನ್ ಅವರನ್ನು ಬಾವಿಗೆ ಎಸೆದು ತಾನು ಸಾಯುತ್ತಿರುವುದಾಗಿ ಹೇಳಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳಿಯರು ಮತ್ತು ಕುಟುಂಬಸ್ಥರು ಬಾವಿಯಲ್ಲಿರುವ ಮೋಟಾರ್ ಪಂಪ್ ಹಿಡಿದು ಕುಳಿತಿದ್ದಳು, ಕೂಡಲೇ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ದುರಾದೃಷ್ಟವಶಾತ್ ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಪತಿಯೊಂದಿಗೆ ವಾಸಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.