HEALTH TIPS

ಪುಣೆ: ಖ್ಯಾತ ವಿಜ್ಞಾನಿ ತನು ಪದ್ಮನಾಭನ್ ತೀವ್ರ ಹೃದಯಾಘಾತದಿಂದ ನಿಧನ

                ಪುಣೆವಿಶ್ವ ಪ್ರಸಿದ್ಧ ಭೌತವಿಜ್ಞಾನಿ ಪ್ರೊ. ತನು ಪದ್ಮನಾಭನ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

              ಪುಣೆಯ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ತೀವ್ರ ಹೃದಯಾಘಾತಕ್ಕೀಡಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ.

              ಕೇರಳದ ತಿರುವನಂತಪುರದಲ್ಲಿ 1957ರ ಮಾರ್ಚ್ 10ರಂದು ಜನಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹಲವು ಪುಸ್ತಕಗಳನ್ನು ಬರೆದಿದ್ದ ಪದ್ಮನಾಭನ್ ಅವರು ವಿಜ್ಞಾನದ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದರು.

ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ನಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಪ್ರೊಫೆಸರ್ ಆಗಿದ್ದ ಪದ್ಮನಾಭನ್ ಅವರು ಕಳೆದ ತಿಂಗಳು ಕೇರಳ ಶಾಸ್ತ್ರ ಪುರಸ್ಕಾರಕ್ಕೆ ಒಳಗಾಗಿದ್ದರು. ರಾಜ್ಯದ ವಿಜ್ಞಾನಿಗಳನ್ನು ಗೌರವಿಸುವ ಕೇರಳ ಸರ್ಕಾರದ ಪ್ರಶಸ್ತಿಯಿದು.


           ಪ್ರೊ.ಪದ್ಮನಾಭನ್ ಅವರು ಕೇವಲ 20 ವರ್ಷದವರಾಗಿದ್ದಾಗ ತಮ್ಮ ಮೊದಲ ಸಂಶೋಧನಾ ಪತ್ರಿಕೆಯನ್ನು ಜನರಲ್ ರಿಲೇಟಿವಿಟಿ ಬಗ್ಗೆ ಬರೆದಿದ್ದರು. ಆಗ ಅವರು ಬಿ.ಎಸ್ಸಿ ಪದವಿ ವಿದ್ಯಾರ್ಥಿ. 1977ರಲ್ಲಿ ಬಿ.ಎಸ್ಸಿ ಪದವಿ ಮುಗಿಸಿ ನಂತರ 1979ರಲ್ಲಿ ಕೇರಳದ ಯುನಿವರ್ಸಿಟಿ ಕಾಲೇಜಿನಲ್ಲಿ ಎಂ.ಎಸ್ಸಿ ಮುಗಿಸಿದ್ದರು. ಎರಡೂ ಪದವಿಗಳಲ್ಲಿ ಚಿನ್ನದ ಪದಕ ಗಳಿಸಿದ್ದರು.

ಕ್ವಾಂಟಮ್ ಸಿದ್ಧಾಂತ, ಗುರುತ್ವಾಕರ್ಷಣೆ, ವಿಶ್ವವಿಜ್ಞಾನ ಮತ್ತು ವಿಶ್ವದಲ್ಲಿ ರಚನೆ ಇತ್ಯಾದಿಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು. ಸಾಮಾನ್ಯ ಸಾಪೇಕ್ಷತೆ ಮತ್ತು ಥರ್ಮೋಡೈನಾಮಿಕ್ಸ್ ಅನ್ನು ಹೊಸ ರೀತಿಯಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಜೋಡಣೆ ಮಾಡುವುದನ್ನು ಸಂಶೋಧನೆ ಮಾಡಿದ್ದರು. ವಿದ್ವಾಂಸ, ಸಂವಹನಕಾರ, ಅಸಾಧಾರಣ ವಿಜ್ಞಾನಿಯಾಗಿದ್ದ ಪದ್ಮನಾಭನ್ ಉತ್ತಮ ಸ್ನೇಹಿತ ಕೂಡ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯ್ ರಾಘವನ್ ಸ್ಮರಿಸಿಕೊಂಡಿದ್ದಾರೆ.

               ಅವರು ಪತ್ನಿ ಡಾ ವಸಂತಿ ಪದ್ಮನಾಭನ್ ಮತ್ತು ಪುತ್ರಿ ಹಂಸ ಅವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries