ಕಾಸರಗೋಡು: ಮಹಿಳಾ ಸಂರಕ್ಷಣೆ ಖಚಿತಪಡಿಸುವ ನಿಟ್ಟಿನಲ್ಲಿ ಕೇರಳ ಪೋಲೀಸ್ ವಿಭಾಗದ ಪಿಂಕ್ ಪೋಲೀಸ್ ಪ್ರೊಟೆಕ್ಷನ್ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ.
ಸೈಬರ್ ಪ್ರಪಂಚದಲ್ಲಿ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ, ಅಪಮಾನ ಸಹಿತ ವಿವಿಧ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಯೋಜನೆ ಚಟುವಟಿಕೆ ನಡೆಸಲಿದೆ. ಸದ್ರಿ ಜಾರಿಯಲ್ಲಿರುವ ಪಿಂಕ್ ಪೆÇಲೀಸ್ ಗಸ್ತು ಇನ್ನಷ್ಟು ಬಿಗಿಗೊಳಿಸಲಾಗುವುದು. ಮನೆಗಳಲ್ಲಿ ದೌರ್ಜನ್ಯ, ವರದಕ್ಷಿಣೆ ಹಿಂಸೆ, ಮಕ್ಕಳ ಮೇಲೆ ದಬ್ಬಾಳಿಕೆ ಇತ್ಯಾದಿಗಳನ್ನು ತಡೆಯಲು, ಅಗತ್ಯದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪಿಂಕ್ ಜನಮೈತ್ರಿ ಬೀಟ್ ಈ ಯೋಜನೆಯ ಅಂಗವಾಗಿದೆ.
ಜಿಲ್ಲೆಯಿಂದ ಆಯ್ದ 6 ಮಂದಿ ಮಹಿಳಾ ಪೆÇಲೀಸ್ ಸಿಬ್ಬಂದಿ ಈ ಸಂಬಂಧ ನಡೆಯುವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಬಸ್, ಖಾಸಗಿ ಬಸ್, ಬಸ್ ತಂಗುದಾಣ, ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳು ಸಹಿತ ಕಡೆಗಳಲ್ಲಿ ಪಿಂಕ್ ಬೀಟ್ ನ ಸೇವೆಯಿರುವುದು. ಜನನಿಬಿಢ ಪ್ರದೇಶಗಳಲ್ಲಿ ಸಮಾಜಬಾಹಿರ ಕೃತ್ಯವೆಸಗುವವರನ್ನು ನಿಯಂತ್ರಿಸಲು ಪಿಂಕ್ ಶಾಡೋ ತಂಡ ಚಟುವಟಿಕೆ ನಡೆಸಲಿದೆ. ಸ್ವಯಂ ಸೇವಾ ಸಂಘಟನೆಗಳ ಸಹಕಾರದೊಂದಿಗೆ ಮಹಿಳಾ ಘಟಕಗಳು ನಡೆಸುತ್ತಿರುವ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿತಗೊಳಿಸಲಾಗುವುದು.
ಜಿಲ್ಲೆಗೆ ಮಂಜೂರು ಮಾಡಲಾದ ಪಿಂಕ್ ಬೈಕ್ ಗಸ್ತಿಗೆ ರಾಜ್ಯ ಪೆÇಲೀಸ್ ವರಿಷ್ಠ ವೈ.ಅನಿಲ್ ಕಾಂತ್ ಹಸುರು ನಿಸಾನೆ ತೋರಿದರು. ಉತ್ತರ ವಲಯ ಐ.ಜಿ. ಅಶೋಕ್ ಯಾದವ್, ಕಣ್ನೂರು ವಲಯ ಡಿ.ಐ.ಜಿ. ಜಿ.ಕೆ.ಸೇತುಮಾಧವನ್, ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಪಿಂಕ್ ಜನಮೈತ್ರಿ ಬೀಟ್ ಯೋಜನೆ ನೋಡೆಲ್ ಅಧಿಕಾರಿ ಡಿ.ವೈ.ಎಸ್.ಪಿ.ಎಸ್.ಪಿ.ಎ.ಸತೀಶ್ ಕುಮಾರ್, ಡಿ.ವೈ.ಎಸ್.ಪಿ.ಗಳು, ಮಹಿಳಾ ಘಟಕ ಸಿ.ಐ. ಭಾನುಮತಿ ಮೊದಲಾದವರು ಉಪಸ್ಥಿತರಿದ್ದರು.