ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆಟ್ರ್ಸ್- ಸ್ಪೋಟ್ರ್ಸ್ ಕ್ಲಬ್ ನ ಹತ್ತನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಮಾಸ್ಟರ್ಸ್ ಕ್ಲಬ್ ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಹೊಳ್ಳ ಕೆಟರರ್ಸ್ ಮಾಲಕ ಶ್ರೀಕೃಷ್ಣ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೀಯಪದವು ಶ್ರೀ ಅಯ್ಯಪ್ಪ ಭಜನಾಮಂದಿರದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತಡ್ಕ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ.ರಾಧಾಕೃಷ್ಣ ಇವರನ್ನು ಸನ್ಮಾನಿಸಲಾಯಿತು.
ಕ್ಲಬ್ ನ ಗೌರವಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕ್ಲಬ್ ನ ಗೌರವ ಸಲಹೆಗಾರ ಜನಾರ್ಧನ ಎಸ್ ಉಪಸ್ಥಿತರಿದ್ದರು. ಕಿರಣ್ ಭಟ್ ಚಂಡಿತೋಟ ಸ್ವಾಗತಿಸಿ, ಅಧ್ಯಕ್ಷ ರಘುವೀರ ರಾವ್ ವಂದಿಸಿದರು. ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಕ್ಲಬ್ ನ ವತಿಯಿಂದ ಸಾಯಿನಿಕೇತನ ಸೇವಾಶ್ರಮದ ಡಾ. ಉದಯಕುಮಾರ್ ನೂಜಿ ಇವರನ್ನು ಸನ್ಮಾನಿಸಿ ಆಶ್ರಮಕ್ಕೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.