ನವದೆಹಲಿ: ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಇವೆರಡು ಬ್ಯಾಂಕ್‌ಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜತೆ ವಿಲೀನ ಆಗಿರುವ ಹಿನ್ನೆಲೆಯಲ್ಲಿ ಇವುಗಳ ಚೆಕ್‌ಗಳು ಅಮಾನ್ಯಗೊಳ್ಳಲಿವೆ.
ಬರುವ ಅಕ್ಟೋಬರ್ 1ರಿಂದ ಚೆಕ್ ಅಮಾನ್ಯವಾಗಲಿದ್ದು, ಹೊಸದಾದ ಚೆಕ್‌ಬುಕ್ ಪಡೆದುಕೊಳ್ಳುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಬ್ಯಾಂಕ್, ಇದನ್ನು ಸ್ಪಷ್ಟಪಡಿಸಿದೆ.
ನಿಮ್ಮ ಹೊಸ ಚೆಕ್ ಬುಕ್ ಅನ್ನು ನಿಮ್ಮ ಶಾಖೆಯಿಂದ ಪಡೆಯಿರಿ ಅಥವಾ ಎಟಿಎಂ/ಐಬಿಎಸ್/ಪಿಎನ್ ಬಿ ಒನ್ ಮೂಲಕ ಅರ್ಜಿ ಸಲ್ಲಿಸಿ. ಯಾವುದೇ ವಹಿವಾಟು ಅನಾನುಕೂಲತೆಯನ್ನು ತಪ್ಪಿಸಲು ಕೂಡಲೇ ಹೊಸ ಚೆಕ್‌ಬುಕ್ ಪಡೆದುಕೊಳ್ಳಿ ಎಂದು ಅದು ತಿಳಿಸಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಟೋಲ್-ಫ್ರೀ ಸಂಖ್ಯೆ 1800-180-2222 ಅನ್ನು ಸಂಪರ್ಕಿಸುವಂತೆ ಬ್ಯಾಂಕ್ ಟ್ವೀಟ್ ಮೂಲಕ ತಿಳಿಸಿದೆ.