ಮಂಜೇಶ್ವರ: ಕುಟುಂಬಶ್ರೀ ಕೇರಳ ರಾಜ್ಯ ಮಿಷನ್ ಹಾಗೂ ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್‍ನ ನೇತೃತ್ವದಲ್ಲಿ ಗಡಿನಾಡು ಕನ್ನಡ ಪ್ರದೇಶದ ಕುಟುಂಬಶ್ರೀಯ ಸಮಗ್ರ ಅಭಿವೃದ್ಧಿಯನ್ನು ಉದ್ದೇಶಿಸಿ "ಗಡಿನಾಡು ಕುಟುಂಬಶ್ರೀ" ಎಂಬ ವಿಷಯದಲ್ಲಿ ಇಂದು ಸಂಜೆ 4.ಕ್ಕೆ ಗಡಿನಾಡು ಪ್ರದೇಶದ ಕನ್ನಡ ಕುಟುಂಬಶ್ರೀ ಸದಸ್ಯರಿಗೆ ಗೂಗಲ್ ಮೀಟ್ ನಡೆಯಲಿದೆ. ಕೇರಳ ರಾಜ್ಯ ಕುಟುಂಬಶ್ರೀ ಮಿಷನ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪಿ.ಐ ಶ್ರೀವಿದ್ಯ ಅವರು ಗೂಗಲ್ ಮೀಟನ್ನು ಉದ್ಘಾಟಿಸಲಿರುವರು. ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್ ಸಂಯೋಜಕ ಸುರೇಂದ್ರನ್ ಟಿ.ಟಿ ಅಧ್ಯಕ್ಷತೆ ವಹಿಸುವರು.