ನವದೆಹಲಿ: ನಕಲಿ ಸುದ್ದಿಗಳ ಪ್ರಸಾರಕ್ಕೆ ತಡೆ ನೀಡುವ ಉದ್ದೇಶದಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆಯಾದ 'ಟೆಲಿಗ್ರಾಮ್'ನಲ್ಲಿ ತನ್ನ ಖಾತೆ 'ಪಿಐಬಿ ಫ್ಯಾಕ್ಟ್ ಚೆಕ್' ಅನ್ನು ಮಂಗಳವಾರ ತೆರೆದಿದೆ.
ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಪ್ರಸಾರವಾಗುವ ಮಾಹಿತಿಯನ್ನು ಪರಿಶೀಲಿಸುವ ಮತ್ತು ಅದರ ಚಂದಾದಾರರಿಗೆ ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ.
ಈ ಹಿಂದೆ ಟೆಲಿಗ್ರಾಮ್‌ನಲ್ಲಿ 'ಫ್ಯಾಕ್ಟ್ ಚೆಕ್' ಹೆಸರಿನಲ್ಲಿ ಕೆಲ ನಕಲಿ ಚಾನೆಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ನಕಲಿ ಚಾನೆಲ್‌ಗಳನ್ನು ಪಿಐಬಿ ಟೆಲಿಗ್ರಾಮ್‌ನಿಂದ ತೆಗೆದುಹಾಕಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ 'ಪಿಐಬಿ ಫ್ಯಾಕ್ಟ್ ಚೆಕ್' ಅನ್ನು ಕೇಂದ್ರ ಸರ್ಕಾರ 2019ರ ನವೆಂಬರ್‌ನಲ್ಲಿ ಆರಂಭಿಸಿದೆ.