ಕಾಸರಗೋಡು: ಕೋವಿಡ್ ಲಾಕ್‍ಡೌನ್ ನಿಬಂಧನೆ ನಡುವೆ ಉತ್ತಮ ರೀತಿಯಲ್ಲಿ ಕೋವಿಡ್ ಕಟ್ಟುನಿಟ್ಟು ಪಾಲಿಸಿಕೊಂಡು ವ್ಯಾಪಾರ ನಡೆಸಿದ ಕಾಞಂಗಾಡಿನ ವ್ಯಾಪಾರಿಗಳಾದ ಗುರುದಾಸ್ ಎಚ್, ಮೊಯ್ದೀನ್‍ಕುಞÂ, ಸಿ. ಮಹಮ್ಮದ್‍ಕುಞÂ ಎಂಬವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ ರಾಜೀವನ್ ಅಭಿನಂದಿಸಿದರು. ಈ ಬಗ್ಗೆ ನಡೆದ ಸಮಾರಂಭದಲ್ಲಿ ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ ಸುಜಾತಾ ಸನ್ಮಾನಿತರಿಗೆ ಶಾಲುಹೊದಿಸಿ ಸನ್ಮಾನಿಸಿದರು. ಡಿವೈಎಸ್‍ಪಿ ಪಿ.ವಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಹೊಸದುರ್ಗ ಸರ್ಕಲ್ ಇನ್ಸ್‍ಪೆಕ್ಟರ್ ಶೈನ್ ಕೆ.ಪಿ, ಸಿ.ಎ ಪೀಟರ್, ಪಿ.ವಿ ರಾಜೇಂದ್ರಕುಮಾರ್ ಉಪಸ್ಥಿತರಿದ್ದರು.
ಕೋವಿಡ್ ಕಾಲಘಟ್ಟದಲ್ಲಿ ಪೊಲೀಸರ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ವ್ಯಾಪಾರ ನಡೆಸುವವರನ್ನು ಗೌರವಿಸುವ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಾರಿಗಳಿಗೆ ಸುತ್ತೋಲೆ ನೀಡಿತ್ತು.