ಕಾಸರಗೋಡು: ರಾಷ್ಟ್ರೀಯ ಪೋಷಕ ಸಪ್ತಾಹ ಅಂಗವಾಗಿ ಸೆ.7 ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಮಕ್ಕಳು, ಯುವಜನ, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮೊದಲಾದವರಿಗೆ ಪೆÇೀಷಕಾಹಾರದ ಮಹತ್ವ ತಿಳಿಸಿಉವ ಉದ್ದೇಶದಿಂದ ಈ ಸಪ್ತಾಹ ನಡೆಸಲಾಗುತ್ತಿದೆ. ಜಿಲ್ಲೆಯ 1348 ಅಂಗನವಾಡಿಗಳಲ್ಲಿ ಈ ನಿಟ್ಟಿನಲ್ಲಿ ಕಲರ್ ಡೇ ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕ್ರಮ ಅಂಗವಾಗಿ ಕಾಮನಬಿಲ್ಲಿನ 7 ಬಣ್ಣಗಳನ್ನು ದಿನವೊಂದರಂತೆ ತಲಾ ಒಂದು ಬಣ್ಣವನ್ನು ಪೆÇೀಷಕಾಹಾರಗಳ ರೂಪದಲ್ಲಿ ಹಣ್ಣು, ತರಕಾರಿಗಳ ಪ್ರದರ್ಶನ ಮತ್ತು ಅವುಗಳ ಮಹತ್ವ ತಿಳಿಸುವ ಸಮಾರಂಭ ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಸಲಾಗುವುದು. ಜಿಲ್ಲೆಯ 12 ಐ.ಸಿ.ಡಿ.ಎಸ್. ಗಳನ್ನು ಕೇಂದ್ರೀಕರಿಸಿ ಕಾರ್ಯಕ್ರಮಗಳು, ಆನ್ ಲೈನ್ ಬಜೆಟ್ ಸ್ಪರ್ಧೆಗಳು ಜರುಗುವುವು ಎಂದು ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ತಿಳಿಸಿದರು. ಜತೆಗೆ ಆಯುಷ್ ಇಲಾಖೆಯ ಸಹಕಾರದೊಂದಿಗೆ ಹಾಲುಣಿಸುವ ತಾಯಂದಿರಿಗೆ , ಗರ್ಭಿಣಿಯರಿಗೆ ಪೆÇೀಷಕಾಹಾರ ಕುರಿತು ವೆಬಿನಾರ್ ನಡೆಯಲಿದೆ. ಇದರ ಅಂಗವಾಗಿ ಜಿಲ್ಲೆಯಲ್ಲಿ ಹಾನುಣಿಸುವ ಕೇಂದ್ರಗಳನ್ನು ಸ್ಥಾಪಿಸುವ ಚಟುವಟಿಕೆಗಳು ನಡೆಯಲಿವೆ.