ಕಾಸರಗೋಡು: ಇಂಧನ ಬೆಲೆಯೇರಿಕೆ ಖಂಡಿಸಿ ಡಿವೈಎಫ್‍ಐ ಕಾಸರಗೋಡು ಬ್ಲಾಕ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರಿ ಕಚೇರಿ ಎದುರು ಸರಣಿ ಸತ್ಯಾಗ್ರಹ ಸೋಮವಾರ ಆರಂಭಗೊಂಡಿತು. ಸೆಪ್ಟಂಬರ್ 10ರ ವರೆಗೆ ಸರಣಿ ಸತ್ಯಾಗ್ರಹ ನಡೆಯಲಿದೆ. ಉದುಮ ಶಾಸಕ, ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸಿ.ಎಚ್ ಕುಞಂಬು ಧರಣಿ ಉದ್ಘಾಟಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಅನಿಲ್ ಚೆನ್ನಿಕ್ಕರ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಕೆ.ಎ ಮಹಮ್ಮದ್ ಹನೀಫ, ಪಿ.ವಿ ಕುಞಂಬು, ಕೆ.ರವೀಂದ್ರನ್, ವಿ. ಶಿವಪ್ರಸಾದ್, ಸುನಿಲ್ ಕಡಪ್ಪುರ, ಉಪಸ್ಥಿತರಿದ್ದರು. ಸುಭಾಷ್ ಪಾಡಿ ಸ್ವಾಗತಿಸಿದರು.