ವಿಶ್ವಸಂಸ್ಥೆ: ಮಕ್ಕಳ ಕಲ್ಯಾಣಕ್ಕೆ ನೆರವಾಗುವ ವಿಶ್ವಸಂಸ್ಥೆಯ “ಸುಸ್ಥಿರ ಅಭಿವೃದ್ಧಿ ಗುರಿಗಳು” (ಎಸ್‌ಡಿಜಿ) ವಿಭಾಗದ ವಕೀಲರಾಗಿ, ನೋಬೆಲ್ ಶಾಂತಿ ಪುರಸ್ಕೃತ ಭಾರತೀಯ ಕೈಲಾಶ್ ಸತ್ಯಾರ್ಥಿ ನೇಮಕಗೊಂಡಿದ್ದಾರೆ.
ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಗೂ ಮುನ್ನವೇ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರ್ರೆಸ್ ಈ ಘೋಷಣೆ ಮಾಡಿದ್ದಾರೆ.
ಸತ್ಯಾರ್ಥಿ ಅವರ ಜತೆಗೆ ಸ್ಟೆಮ್ ಕಾರ್ಯಕರ್ತ ಮನೋಝ್ ರಬಾನಲ್, ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರಾಡ್ ಸ್ಮಿತ್ ಮತ್ತು ಕೆ- ಪಾಪ್ ಸೂಪರ್ ಸ್ಟಾರ್ ಬ್ಲ್ಯಾಕ್ ಪಿಂಕ್- ಇವರನ್ನೂ ನೇಮಿಸಲಾಗಿದೆ.
ಬಾಲಕಾರ್ಮಿಕ ಪಿಡುಗು ನಿವಾರಣೆ, ಲಿಂಗ ಸಮಾನತೆ ಮತ್ತು ಮಕ್ಕಳ ಹಕ್ಕುಗಳನ್ನು ಪ್ರೋತ್ಸಾಹಿಸುವ ಹೊಣೆ ಎಸ್‌ಡಿಜಿ ವಕೀಲರ ಮೇಲಿರುತ್ತದೆ.