ತಿರುವನಂತಪುರಂ: ಮಾಸ್ಕ್ ಧರಿಸುವ ಬಗ್ಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೆಲವರು ವ್ಯಾಪಾರ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವುದು ಗಮನಕ್ಕೆ ಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಕೋವಿಡ್ ಬಹುತೇಕ ನಿಯಂತ್ರಣದಲ್ಲಿದೆ ಮತ್ತು ಅದಕ್ಕಾಗಿಯೇ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದರು. ಒಂದರಿಂದ ಏಳನೇ ತರಗತಿ ಮತ್ತು 10 ಮತ್ತು 12 ನೇ ತರಗತಿಗಳು ನವೆಂಬರ್ 1 ರಂದು ಆರಂಭವಾಗಲಿವೆ. 15 ರಿಂದ ಇತರೆ ತರಗತಿಗಳು ಆರಂಭವಾಗಲಿವೆ. ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಸಚಿವರು ಚರ್ಚೆ ನಡೆಸಿರುವರು. ಗುರುವಾರ ಉನ್ನತ ಮಟ್ಟದ ಸಭೆ ನಡೆಯಲಿದೆ. ಕರಡು ಯೋಜನೆಯನ್ನು ತಯಾರಿಸಿ ಇತರ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದಿರುವರು.