ಜುಲೈ ಮೊದಲ ವಾರದಲ್ಲಿ ಹೊಸ ಅಡಿಕೆ ದರ 420 ರೂ. ಆಸುಪಾಸಿನಲ್ಲಿತ್ತು. ಜುಲೈ ಅಂತ್ಯದಲ್ಲಿ 45೦ ರೂ.ಗೆ ಏರಿಕೆಯಾಗಿದ್ದ ದರ ಬಳಿಕ ಕಳೆದ ಮೂರು ವಾರಗಳಿಂದ ಅದೇ ದರದಲ್ಲಿ ಸ್ಥಿರವಾಗಿತ್ತು. ಇದೀಗ ಮತ್ತೆ 15 ರೂ. ನಿಂದ 20 ರೂ. ವರೆಗೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ವ್ಯವಹಾರ ಗರಿಗೆದರಿದೆ.
ಸೋಮವಾರ ಸಹಕಾರ ಸಂಸ್ಥೆ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿಯೇ 460 ರೂ. ದರದಲ್ಲಿ ಹೊಸ ಅಡಿಕೆ ಖರೀದಿಯಾಗಿದೆ. ನಿನ್ನೆಯಷ್ಟೇ ಚೌತಿ ಹಬ್ಬ ಆಚರಿಸಲ್ಪಟ್ಟಿದ್ದು, ನಿನ್ನೆ ಮಾರುಕಟ್ಟೆಗೆ ರಜಾ ಇತ್ತು. ಆದರೆ ಇಂದು ಮತ್ತೆ ಮಾರುಕಟ್ಟೆ ತೆರೆಯುತ್ತಿರುವಂತೆ ಹೊಸ ಅಡಿಕೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಇದೇ ವೇಳೆ ಹಳೆ ಅಡಿಕೆ ಧಾರಣೆ 520 ರೂ. ದರದಲ್ಲೇ ಸ್ಥಿರವಾಗಿದೆ. ಆದರೆ ಹೊಸ ಅಡಿಕೆ ದರ ಮಾತ್ರ ಏರಿಕೆಯಾಗುತ್ತಲೇ ಇದೆ.