ಬೆಂಗಳೂರು: 900 ಎಂಎಂ ಮಳೆಯ ಮೂಲಕ ಮೇಘಾಲಯದಲ್ಲಿರುವ ಚಿರಾಪುಂಜಿ ವಿಶ್ವದ ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶ. ಬೆಂಗಳೂರಿನ ವಾರ್ಷಿಕ ಮಳೆಯ ಪ್ರಮಾಣ ಇದಾಗಿದ್ದು, ಇಂತಹ ತೀವ್ರ ಮಳೆಯಾಗುವ ಪ್ರದೇಶವೂ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಇಲ್ಲದ ಶುಷ್ಕ ವಾತಾವರಣ ಉಂಟಾಗುತ್ತಿದೆ.
ಆದರೆ ಕೆಲವು ವರದಿಗಳು ಹೇಳುವಂತೆ ಇದಕ್ಕೆ ಕಾರಣ ಹವಾಮಾನ ಬದಲಾವಣೆಯಲ್ಲ ಎಂದು ಪ್ರೊಫೆಸರ್ ಜೆ ಶ್ರೀನಿವಾಸನ್- ಅಧ್ಯಕ್ಷರು, ಹವಾಮಾನ ಬದಲಾವಣೆಯ ದಿವೆಚಾ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಹೇಳಿದ್ದಾರೆ.
ಎಂದಿನ ಮಳೆಯ ವ್ಯತ್ಯಾಸವನ್ನೇ ಹವಾಮಾನ ಬದಲಾವಣೆಗೆ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದೆ. ಬಂಗಾಳ ಕೊಲ್ಲಿಯಿಂದ ಬರುವ ತೇವಭರಿತ ಗಾಳಿ ಈ ಪ್ರದೇಶವನ್ನು ತಲುಪದೇ ಒಡಿಶಾದ ಕಡೆ ಹೋದಾಗ ಈ ಪ್ರದೇಶದಲ್ಲಿ ಮಳೆಯಾಗುವುದಿಲ್ಲ ಎಂದು ಭಾರತೀಯ ಮುಂಗಾರಿನ ನೈಜ ಚಾಲನೆ ಯಾವುದರಿಂದ? ಎಂಬ ವಿಷಯದ ಬಗ್ಗೆ ಹವಾಮಾನ ಬದಲಾವಣೆಗೆ ಡಿವೆಚಾ ಕೇಂದ್ರ, ಐಐಎಸ್ ಸಿಯಿಂದ ಆಯೋಜಿಸಲಾಗಿದ್ದ ವೆಬಿನಾರ್ ನಲ್ಲಿ ಮಾತನಾಡುತ್ತಿದ್ದ ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ.
ಸಮಾರಂಭದ ಪಾರ್ಶ್ವದಲ್ಲಿ ಟಿಎನ್‌ಐಇಯೊಂದಿಗೆ ಮಾತನಾಡಿರುವ ಅವರು, ತೇವಭರಿತ ಗಾಳಿ ಪರ್ವತವನ್ನು ತಾಗಿ ಮೇಲೇಳುತ್ತದೆ ಇದರಿಂದ ಮಳೆಯುಂಟಾಗುತ್ತದೆ. ಆದರೆ ಪರ್ವತಕ್ಕೆ ಸಮಾನಾಂತರವಾಗಿ ಹಾದು ಹೋದಾಗ ಈ ಗಾಳಿ ಪರ್ವತವನ್ನು ತಾಕದೇ ಅದರ ಸುತ್ತ ಹೋಗುತ್ತದೆ. ತಾಪಮಾನ ಕುಸಿಯುವುದಕ್ಕೆ ಹಾಗೂ ತೇವಾಂಶ ಘನೀಕರಿಸುವುದಕ್ಕೆ ತೇವಾಂಶ ಭರಿತ ಗಾಳಿ ಮೇಲೆ ಹೋಗಬೇಕು ಆದ್ದರಿಂದ ಸಣ್ಣ ಬದಲಾವಣೆಯೂ ಮಳೆಯಲ್ಲಿ ಭಾರಿ ವ್ಯತ್ಯಾಸವಾಗುತ್ತದೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.
ಹವಾಮಾನ ಬದಲಾವಣೆ ಮಳೆಯ ಮಾದರಿಗಳಲ್ಲಿ ಸರಾಸರಿ 30 ವರ್ಷಗಳ ಎರಡು ಅವಧಿಯಲ್ಲಿ ಬದಲಾವಣೆಯಾಗಿದೆ. ಪಶ್ಚಿಮ ಘಟ್ಟಗಳ ಮೇಲಿನ ಮಳೆಯ ಪ್ರಭಾವ ಚಿರಾಪುಂಜಿಯಷ್ಟೇ ಇದೆ.
ಈ ವರ್ಷ ಭಾರತದ ಮುಂಗಾರು ಭಿನ್ನವಾಗಿದೆ ಎನ್ನುವ ಪ್ರೊಫೆಸರ್ ಶ್ರೀನಿವಾಸನ್, ಜೂನ್ ತಿಂಗಳಲ್ಲಿನ ಮುಂಗಾರು ಸಾಮಾನ್ಯವಾಗಿತ್ತು. ಜುಲೈ ತಿಂಗಳಲ್ಲಿ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಆಗಸ್ಟ್ ತಿಂಗಳಲ್ಲಿ ವಿಪತ್ತು ಸೃಷ್ಟಿಸುವಂತಿತ್ತು. ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚಾಗಿತ್ತು. ಆಗಸ್ಟ್ ತಿಂಗಳ ಕಡಿಮೆ ಮಳೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸದ್ಯಕ್ಕೆ ನಮಗೆ ಸಾಕಷ್ಟು ಡೇಟಾ ಇಲ್ಲ. 1993 ರ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಇದೇ ಮಾದರಿಯ ಮಳೆಯಾಗಿತ್ತು, ಈ ಬಗ್ಗೆ ಅಧ್ಯಯನ ಮಾಡಬೇಕು ಎಂದು ಹೇಳುತ್ತಾರೆ.