HEALTH TIPS

ಕೀರ್ತಿಶೇಷ ಯಕ್ಷಗಾನ ಕಲಾವಿದರ ಸಂಸ್ಮರಣೆ

        ಬದಿಯಡ್ಕ: ಸಾಮಾಜಿಕ ಜಾಲ ತಾಣವನ್ನು ಕೇವಲ ಕಾಲಹರಣಕ್ಕಾಗಿ ಅಥವಾ ಇನ್ನಿತರ ಋಣಾತ್ಮಕ ಅಂಶಗಳಿಗೆ ದುರ್ಬಳಕೆಯಾಗುತ್ತಿರುವ ಇಂದಿನ ಕಾಲದಲ್ಲಿ ಸಾಮಾಜಿಕ ಜಾಲ ತಾಣದ ಮೂಲಕ ಹಲವು ಯಶಸ್ವಿ ಪ್ರಯೋಗಗಳನ್ನು ಮಾಡಿ ಜನಜಾಗೃತಿ ಮೂಡಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದು ಶ್ರೀಮದ್ ಎಡನೀರು ಮಠಾ„ೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದರು. 

                      ಅವರು ಶ್ರೀ ಮಠದಲ್ಲಿ ಯಕ್ಷಾನುಗ್ರಹ ವಾಟ್ಸಪ್ ಬಳಗದ ನೇತೃತ್ವದಲ್ಲಿ ಕೀರ್ತಿಶೇಷ ಯಕ್ಷಗಾನ ಕಲಾವಿದರ ಸಂಸ್ಮರಣೆ ಮರೆಯಲಾಗದ ಮಹಾನುಭಾವರು ಶತದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. 

                     ಈ ಸಂದರ್ಭದಲ್ಲಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಂಸ್ಮರಣೆಯನ್ನು ಸದಾಶಿವ ಶೆಟ್ಟಿಗಾರ್ ನಡೆಸಿದರು. 

ಯಕ್ಷಾನುಗ್ರಹ ವಾಟ್ಸಪ್ ಬಳಗದ ರೂವಾರಿ, ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು  ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಭಟ್ ಮಾಳ, ಶ್ಯಾಮ ಪ್ರಸಾದ್ ಕುಂಚಿನಡ್ಕ, ರಾಧಾಕೃಷ್ಣ ಕಲ್ಚಾರ್, ಉದಯ ಕಂಬಾರು, ವಾಸು ಬಾಯಾರು, ಶ್ರೀಮುಖ ಮಯ್ಯ, ವೆಂಕಟ್ರಮಣ ಭಟ್ ತಲ್ಪಣಾಜೆ, ಕೆ.ಜಗದೀಶ್ ಕೂಡ್ಲು, ಸೂರ್ಯ ಭಟ್ ಎಡನೀರು, ವೆಂಕಟ್ ಭಟ್ ಎಡನೀರು, ವಾಟ್ಸಾಪ್ ಬಳಗದ ಪ್ರಮುಖರು ಉಪಸ್ಥಿತರಿದ್ದರು.  

                ಸದಾಶಿವ ರಾವ್ ನೆಲ್ಲಿಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ. ಶ್ರುತಕೀರ್ತಿ ರಾಜ್ ಉಜಿರೆ ವಂದಿಸಿದರು. ಬಳಗದ ನೇತೃತ್ವದಲ್ಲಿ ಸತ್ವ ಶೈಥಿಲ್ಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries