ನವದೆಹಲಿ: ಕೋವಿಡ್-19 ಎರಡನೇ ಅಲೆಯ ಕಾರಣ ಜೂನ್‌ನಲ್ಲಿ ವಿಧಿಸಲಾಗಿದ್ದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ಮೇಲಿನ ವೆಚ್ಚ ನಿರ್ಬಂಧವನ್ನು ಹಣಕಾಸು ಸಚಿವಾಲಯ ಶುಕ್ರವಾರ ಹಿಂಪಡೆದಿದೆ.
ಸಾರ್ವಜನಿಕ ಹಣಕಾಸು ಸುಧಾರಣೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ತುರ್ತು ಕಾರಣಕ್ಕಾಗಿ ಹಾಗೂ ಮಾರ್ಗಸೂಚಿಗಳ ಪರಿಶೀಲನೆಯ ನಂತರ ವೆಚ್ಚ ನಿರ್ಬಂಧವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.