ಕಾಸರಗೋಡು: ಕೋವಿಡ್ ತಪಾಸಣೆಗಳ ಸಂಖ್ಯೆ ಕಡಿಮೆಯಿರುವ ಸ್ಥಳೀಯಾಡಳಿತ ಸಂಸ್ಥೆಗಳಿಗೆ ವಿಶೇಷ ಗಮನಹರಿಸಿ ಆರ್.ಟಿ.ಪಿ.ಸಿ.ಆರ್. ತಪಾಸಣೆ ಅಧಿಕಗೊಳಿಸಲು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರದ ಸಭೆ ತೀರ್ಮಾನಿಸಿದೆ.
ಕೋವಿಡ್ ತಪಾಸಣೆಗಳಿಗಾಗಿ ಜಿಲ್ಲಾ ವೈದ್ಯಾಧಿಕಾರಿ ಅವರು ತಾತ್ಕಾಲಿಕ ನೇಮಕಾತಿ ನಡೆಸಿರುವ ಸಿಬ್ಬಂದಿಯ ಸೇವೆಯನ್ನು ವಾಕ್ಸಿನೇಶನ್ ಪ್ರಕ್ರಿಯೆಗೂ ಬಳಸಲು ನಿರ್ಧರಿಸಲಾಗಿದೆ.
ಸಮಿತಿ ಅಧ್ಯಕ್ಷೆ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರು ಅಧ್ಯಕ್ಷತೆ ವಹಿಸಿದ್ದರು.