ತಿರುವನಂತಪುರಂ: ರಾಜ್ಯದಲ್ಲಿ ಕೊರೋನಾ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರ ಯೋಜಿಸುತ್ತಿದೆ. ಹೋಟೆಲ್‍ಗಳಲ್ಲಿ ಕುಳಿತು ಊಟ ಮಾಡಲು ಅವಕಾಶ ನೀಡುವ ಸಾಧ್ಯತೆಗಳಿವೆ. ಸರ್ಕಾರಿ ಕಚೇರಿಗಳು ಶನಿವಾರ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ, ಎಲ್ಲಾ ಸೇವೆಗಳು ಶನಿವಾರ ಲಭ್ಯವಿರುತ್ತವೆ.
ಕೋವಿಡ್ ಎರಡನೇ ಅಲೆಯ ಬಳಿಕ ಸರ್ಕಾರಿ ನೌಕರರಿಗೆ ಸ್ಥಗಿತಗೊಳಿಸಲಾದ ಪಂಚಿಂಗ್ ವ್ಯವಸ್ಥೆಯನ್ನು ಪುನರಾರಂಭಿಸುವ ಸೂಚನೆಗಳಿವೆ. ಕಾರ್ಡ್ ಬಳಸಿ ಪಂಚಿಂಗ್ ವ್ಯವಸ್ಥೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ. ಬಯೋಮೆಟ್ರಿಕ್ ವ್ಯವಸ್ಥೆಯನ್ನು ನಂತರ ಮರುಪ್ರಾರಂಭಿಸಲಾಗುತ್ತದೆ.
ಇಂದು ನಡೆಯಲಿರುವ ಪರಿಶೀಲನಾ ಸಭೆಯಲ್ಲಿ ಮತ್ತಷ್ಟು ವಿನಾಯಿತಿಗಳ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.