ತಿರುವನಂತಪುರಂ: ರಾಜ್ಯದಲ್ಲಿ ಪ್ಲಸ್ ಒನ್ ಪರೀಕ್ಷೆಯನ್ನು ಆಫ್ ಲೈನ್‍ನಲ್ಲಿ ನಡೆಸಲು ಅನುಮತಿ ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‍ನಲ್ಲಿ ಅಫಿಡವಿಟ್ ಸಲ್ಲಿಸಿದೆ. ರಾಜ್ಯದಲ್ಲಿ ಆನ್ ಲೈನ್‍ನಲ್ಲಿ ಪರೀಕ್ಷೆ ನಡೆಸುವುದು ಈಗ ಕಷ್ಟಕರವಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಕಂಪ್ಯೂಟರ್ ಮತ್ತು ಇಂಟರ್ನೆಟ್ ಕೊರತೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ.
ಮನೆಯಲ್ಲಿ ಕುಳಿತು ಮಕ್ಕಳು ಬರೆದ ಮಾದರಿ ಪರೀಕ್ಷೆಗಳು ಮೌಲ್ಯಮಾಪನಕ್ಕೆ ಮಾನದಂಡವಾಗಲಾರದು. ಅಕ್ಟೋಬರ್‍ನಲ್ಲಿ ಮೂರನೇ ತರಂಗಕ್ಕೆ ಮುನ್ನ ಪರೀಕ್ಷೆ ನಡೆಯಲಿದೆ.
ಮೊನ್ನೆ ಸುಪ್ರೀಂ ಕೋರ್ಟ್ ಸಾರ್ವಜನಿಕ ಪರೀಕ್ಷೆಗಳಿಗೆ ತಡೆ ನೀಡಿತ್ತು. ಆ ಬಳಿಕ, ನ್ಯಾಯಾಲಯವು ಪ್ಲಸ್ ವನ್ ಪರೀಕ್ಷೆಗೆ ತಡೆ ನೀಡಿತ್ತು.