ಕೊಟ್ಟಾಯಂ: ಪಾಲ ಡಯಾಸಿಸ್ ಬಿಷಪ್ ಜೋಸೆಫ್ ಕಲ್ಲರಂಗಟ್ಟಿಲ್ ನ ಮಾದಕದ್ರವ್ಯ ಜಿಹಾದ್ ಹೇಳಿಕೆಯನ್ನು ವಿರೋಧಿಸಿ ಮುಸ್ಲಿಂ ಐಕ್ಯವೇದಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಕ್ಕಿಂತಲೂ ಹೆಚ್ಚು ಪ್ರತಿಭಟನಕಾರರ ವಿರುದ್ದ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಿಷಪ್ ಹೇಳಿಕೆಯನ್ನು ಕಟುವಾಗಿ ಟೀಕಿಸಿ ಕಾರ್ಯಕರ್ತರು ಪಾಲಾದಲ್ಲಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಾಂಜಿರಪಳ್ಳಿ ಮುಸ್ಲಿಂ ಐಕ್ಯ ವೇದಿಕೆಯ ವಿರುದ್ಧ ಪೋಲೀಸರು ಕೊರೋನ ನಿರ್ಬಂಧಗಳನ್ನು ಉಲ್ಲಂಘಿಸಿದ ಮತ್ತು ಕ್ಷೇತ್ರದ ವಲಯದಲ್ಲಿ ಮೆರವಣಿಗೆ ನಡೆಸಿದ ಪ್ರಕರಣವನ್ನು ದಾಖಲಿಸಿದ್ದಾರೆ.