ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾತರ ಪ್ರದೇಶಗಲಲ್ಲಿ ಕುಟುಂಬಶ್ರೀ ಪ್ರಬಲೀಕರಣ ಚಟುವಟಿಕೆಗಳಿಗೆ ನಾಂದಿ ಹಾಡುವ ಮೂಲಕ "ಗಡಿನಾಡ ಕುಟುಂಬಶ್ರೀ" ವೆಬಿನಾರ್ ಸೀರೀಸ್ ಆರಂಭಗೊಂಡಿದೆ.
ಕುಟುಂಬಶ್ರೀ ಕಾರ್ಯಕಾರಿ ನಿರ್ದೇಶಕಿ ಪಿ.ಶ್ರೀವಿದ್ಯಾ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕುಟುಂಬಶ್ರೀ ಜಾರಿಗೊಳಿಸುವ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ತಲಪಿಸುವ, ಹೆಚ್ಚುವರಿ ಜನ ಸಹಭಾಗಿತ್ವ ಖಚಿತ ಪಡಿಸುವ ಯತ್ನಗಳನ್ನು ಕುಟುಂಬಶ್ರೀ ನಡೆಸುತ್ತದೆ. ಲಿಂಗಸಮತ್ವ, ಜೆಂಡರ್ ಜಾಗೃತಿ, ಬಡತನ ನಿವಾರಣೆ ಚಟುವಟಿಕೆಗಳು, ಫಾಂ ಲೈವ್ಲಿ ಹುಡ್ ವಲಯಗಳ ಅವಕಾಶಗಳು ಇತ್ಯಾದಿ ಈ ನಿಟ್ಟಿನಲ್ಲಿ ಬಳಸಲಾಗುವುದು ಎಂದು ನುಡಿದರು.
ಕನ್ನಡ ಭಾಷಿಗರ ಪ್ರದೇಶಗಳಲ್ಲಿ ಅವಕಶಗಳನ್ನು ಹೆಚ್ಚಿಸುವ ಮತ್ತು ಅವರಿಗೆ ಅಗತ್ಯವಿರುವ ಮಾಹಿತಿಗಳನ್ನು ಹಂಚುವ ನಿಟ್ಟಿನಲ್ಲಿ ಐ.ಇ.ಸಿ. ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ವಿವಿಧ ಯಫೆÇೀಜನೆಗಳನ್ನುಕೆಳಸ್ತರಕ್ಕೆ ವ್ಯಾಪಿಸುವ ನಿಟ್ಟಿನಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾತ ಪಂಚಾಯತ್ ಗಳ ಮಟ್ಟದಲ್ಲಿ ಮತ್ತು ವಿವಿಧೆಡೆಗಳ ವಿಚಾರಗಳಲ್ಲಿ ಪರಿಣತರು ವೆಬಿನಾರ್ ನಡೆಸಲಿದ್ದಾರೆ.