ಬದಿಯಡ್ಕ: ಎ.ಐ.ವೈ.ಎಫ್ ಕುಂಬ್ಡಾಜೆ ವಲಯ ಸಮಿತಿಯ ನೇತೃತ್ವದಲ್ಲಿ 2020-21ನೇ ಸಾಲಿನಲ್ಲಿ ಎಸ್.ಎಸ್ .ಎಲ್.ಸಿ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಅಭಿನಂದನಾ ಸಮಾರಂಭವನ್ನು ಎ.ಐ.ವೈ.ಎಫ್ ಮಂಡಲ ಕಾರ್ಯದರ್ಶಿ ಸನೋಜ್ ಕಾರಡ್ಕ ಉದ್ಘಾಟಿಸಿದರು. ಎಐವೈಎಫ್ ವಲಯ ಸಮಿತಿಯ ಅಧ್ಯಕ್ಷ ಸಿಯಾಬ್ ಅನ್ನಡ್ಕ ಅಧ್ಯಕ್ಷತೆ ವಹಿಸಿದರು. ಕುಂಬ್ಡಾಜೆ ಪಂಚಾಯತಿ ಘಟಕದ ಅಧ್ಯಕ್ಷ ಅಬ್ದುಲ್ ರಝಾಕ್ ಟಿ ಯಂ, ಸಿ.ಪಿ.ಐ ಕುಂಬ್ಡಾಜೆ ಸ್ಥಳೀಯ ಸಮಿತಿ ಕಾರ್ಯದರ್ಶಿ ಪ್ರಕಾಶ್ ಕುಂಬ್ಡಾಜೆ, ವಲಯ ಸಮಿತಿ ಸದಸ್ಯರಾದ ರಫೀಕ್ ಮರಿಕಾನ,ವಿಜು ಕುಂಬ್ಡಾಜೆ ,ರೋಬಿನ್ ಗೋಸಾಡ, ಅಶ್ವತಿ , ಅಜಿತ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಸಿ.ಪಿ.ಐ Àಸ್ಥಳೀಯ ಸಮಿತಿ ಸದಸ್ಯ ಮಾಥ್ಯು ಗಾಡಿಗುಡ್ಡೆ, ಅಚ್ಚುತ ಪಾವೂರು ಎ.ಐ.ವೈ.ಎಫ್. ಸದಸ್ಯರಾದ ರೋಶನ್, ಅಬ್ದುಲ ಮರಿಕಾನ, ಉದಯ ಮೊದಲಾದವರು ಉಪಸ್ಥಿತರಿದ್ದರು. ಎ.ಐ.ವೈ.ಎಫ್ ಕುಂಬ್ಡಾಜೆ ವಲಯ ಕಾರ್ಯದರ್ಶಿ ಗಣೀಶ ಮಣ್ಣಾಪು ಸ್ವಾಗತಿಸಿ, ಅಕ್ಷಯ್ ಮಣ್ಣಾಪು ವಂದಿಸಿದರು.