ಮುಳ್ಳೇರಿಯ: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 5 ಲಕ್ಷ ಅನುದಾನದಲ್ಲಿ ಬೆಳ್ಳೂರು ಗ್ರಾ.ಪಂ.1ನೇ ವಾರ್ಡ್ ನಲ್ಲಿ ನಿರ್ಮಿಸಲಾದ ಈಂದುಮೂಲೆ ರೆಂಜಮೂಲೆ ಕಾಂಕ್ರೀಟ್ ರಸ್ತೆಯನ್ನು ಗ್ರಾ.ಪಂ.ಅಧ್ಯಕ್ಷ ಶ್ರೀಧರ ಎಂ.ಬುಧವಾರ ಉದ್ಘಾಟಿಸಿದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ರೈ ಅಧ್ಯಕ್ಷತೆ ವಹಿಸಿದ್ದರು. ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್, ವಾರ್ಡ್ ಸದಸ್ಯೆ ಗೀತಾ ಬಿ.ಎನ್., ವಾರ್ಡ್ ಕನ್ವೀನರ್ ರಾಜಗೋಪಾಲ ಉಪಸ್ಥಿತರಿದ್ದರು.