HEALTH TIPS

ಸರ್ಕಾರಿ ಶಾಲೆ ಮಕ್ಕಳಿಗೆ ಪೌಷ್ಠಿಕ ಆಹಾರ: 'ಪಿಎಂ ಪೋಷಣ್​' ಯೋಜನೆ

              ನವದೆಹಲಿ: ದೇಶಾದ್ಯಂತ ಬಡಮಕ್ಕಳಿಗೆ ಸುಪೋಷಿತ ಆಹಾರ ಒದಗಿಸಲು ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು 'ಪಿಎಂ ಪೋಷಣ್' ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇಂದು ನವದೆಹಲಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್​ ಠಾಕುರ್​​ ತಿಳಿಸಿದ್ದಾರೆ.

            ಪ್ರಧಾನ ಮಂತ್ರಿ ಪೋಷಣ್​ ಯೋಜನೆಯ ಅಡಿಯಲ್ಲಿ ದೇಶದ 11 ಲಕ್ಷ 20 ಸಾವಿರ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಲಾಗುವುದು. ಬಡವಿದ್ಯಾರ್ಥಿಗಳ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಸ್ಥಳೀಯವಾಗಿ ಸಿಗುವ ಪೋಷಕಾಂಶಭರಿತ ಆಹಾರಗಳನ್ನು ಬಳಸಲಾಗುವುದು ಎಂದು ಠಾಕುರ್​ ತಿಳಿಸಿದ್ದಾರೆ.

              ಈ ಯೋಜನೆಯು 5 ವರ್ಷಗಳ ಕಾಲ ನಡೆಯಲಿದ್ದು, ಇದಕ್ಕಾಗಿ 1.31 ಲಕ್ಷ ಕೋಟಿ ರೂ.ಗಳ ವೆಚ್ಚವಾಗಲಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೊಡುಗೆಯು 60:40 ರೇಷಿಯೋದಲ್ಲಿರುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಶೇ. 90 ರಷ್ಟು ಕೊಡುಗೆ ಕೇಂದ್ರ ಸರ್ಕಾರದ್ದೇ ಇರಲಿದೆ ಎಂದು ಸಚಿವ ಠಾಕುರ್​ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries