ಕೋಝಿಕ್ಕೋಡ್: ಕೋಝಿಕ್ಕೋಡ್ ನಲ್ಲಿ ನಿಪಾ ದೃಢಪಟ್ಟ ವ್ಯಾಪ್ತಿಯಲ್ಲಿ ರೋಗ ಹರಡುವಿಕೆಯು ತೀವ್ರಗೊಳ್ಳುವ ಸಾಧ್ಯತೆಯಿಲ್ಲ ಎಂದು ನಿನ್ನೆ ಆಗಮಿಸಿದ ಕೇಂದ್ರ ತಂಡ ಪ್ರಾಥಮಿಕ ವರದಿ ತಿಳಿಸಿದೆ. ಕೊರೋನಾ ಪ್ರೋಟೋಕಾಲ್ ನ್ನು ಅನುಸರಿಸುವ ಮೂಲಕ ರೋಗ ನಿಯಂತ್ರಣ ಸಾಧ್ಯ. ಅಗತ್ಯವಿದ್ದಲ್ಲಿ ಕೇರಳಕ್ಕೆ ಹೆಚ್ಚಿನ ತಜ್ಞರನ್ನು ಕಳುಹಿಸುವುದಾಗಿ ಕೇಂದ್ರ ಹೇಳಿದೆ. ಕೇಂದ್ರವು ವೈಮಾನಿಕ ಸಮೀಕ್ಷೆಗೂ ನಿರ್ದೇಶನ ನೀಡಿದೆ.
12 ವರ್ಷದ ಮಗುವಿಗೆ ಸೋಂಕು ತಗುಲಲು ಕಾರಣವೇನೆಂದು ತಿಳಿದಿಲ್ಲ. H5N1 ವೈರಸ್ ಹರಡುವಿಕೆಯು ರಾಂಬುಟಾನ್ ನಿಂದ ಆಗಿರಬಹುದು ಎಂಬುದು ಕೇಂದ್ರ ತಂಡದ ಆರಂಭಿಕ ತೀರ್ಮಾನವಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.
ಪಜೂರಿನಲ್ಲಿ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಇಂದು ಮೃತಪಟ್ಟ ಮಗುವಿನ ಮನೆಯ ಬಳಿ ತಪಾಸಣೆ ನಡೆಸಲಿದ್ದಾರೆ. ಮಗುವಿನ ಮನೆಗೆ ಆಗಮಿಸಿ ಈ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದ ಆಡೊಂದನ್ನು ಪರೀಕ್ಷಿಸಿ ಮಾದರಿ ಸಂಗ್ರಹಿಸಲಿದೆ. ಈ ಪ್ರದೇಶದಲ್ಲಿ ಬಾವಲಿಗಳ ಬಗೆಗೂ ಪರಿಶೀಲಿಸಲಾಗುತ್ತದೆ.
ಹೆಚ್ಚಿನ ಪರೀಕ್ಷೆಗಳಿಗಾಗಿ ಪುಣೆ ವೈರಾಲಜಿ ಲ್ಯಾಬ್ ಅಧಿಕಾರಿಗಳು ಶೀಘ್ರವೇ ಕೋಯಿಕ್ಕೋಡ್ ತಲುಪಲಿದ್ದಾರೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ವೀಕ್ಷಣೆಯಲ್ಲಿರುವವರ. ನಿಪಾ ಟ್ರುನಾಟ್ ಪರೀಕ್ಷೆ ನಡೆಸಲಿದ್ದಾರೆ. ಪುಣೆಯ ವೈರಾಲಜಿ ಸಂಸ್ಥೆಯ ತಂಡವು ಈ ಉದ್ದೇಶಕ್ಕಾಗಿ ವಿಶೇಷ ಪ್ರಯೋಗಾಲಯವನ್ನು ಸ್ಥಾಪಿಸಲಿದೆ. ಪರೀಕ್ಷೆಯು ಪಾಸಿಟಿವ್ ಎಂದು ಕಂಡುಬಂದಲ್ಲಿ, ಪುಣೆಯ ವೈರಾಲಜಿ ಸಂಸ್ಥೆಯಿಂದ ನಿಶ್ಚಿತ ತೀರ್ಮಾನವನ್ನು ಪಡೆಯಬಹುದಾಗಿದೆ.