HEALTH TIPS

ಅಸ್ಸಾಂ: ರಾಜೀವ್‌ಗಾಂಧಿ ನ್ಯಾಷನಲ್‌ ಪಾರ್ಕ್‌ ಮರುನಾಮಕರಣಕ್ಕೆ ಸಂಪುಟ ನಿರ್ಧಾರ

              ಗುವಾಹಟಿ: ಅಸ್ಸಾಂನ ರಾಜೀವ್‌ಗಾಂಧಿ ನ್ಯಾಷನಲ್‌ ಪಾರ್ಕ್‌ನ ಹೆಸರನ್ನು ಒರಂಗ್ ನ್ಯಾಷನಲ್‌ ಪಾರ್ಕ್‌ ಎಂದು ಬದಲಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

            ಜಲಸಂಪನ್ಮೂಲ ಸಚಿವ ಪೀಯೂಷ್‌ ಹಜಾರಿಕಾ ಅವರು ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.

            'ಆದಿವಾಸಿಗಳು ಹಾಗೂ ಚಹ ತೋಟಗಳಲ್ಲಿ ದುಡಿಯುವ ಬುಡಕಟ್ಟು ಜನರ ಒತ್ತಾಸೆಯ ಮೇರೆ ಈ ನಿರ್ಧಾರ ಕೈಗೊಳ್ಳಲಾಗಿದೆ' ಅವರು ಹೇಳಿದ್ದಾರೆ.

                ದರಾಂಗ್ ಮತ್ತು ಸೋನಿತ್‌ಪುರ ಜಿಲ್ಲೆಗಳ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ಉತ್ತರ ತೀರದಲ್ಲಿ ಈ ಉದ್ಯಾನ ಇದೆ. 79.28 ಚದರ ಕಿ.ಮೀ ವಿಸ್ತೀರ್ಣದ ಈ ಅರಣ್ಯವನ್ನು 1985ರಲ್ಲಿ ವನ್ಯಜೀವಿ ಧಾಮ, ನಂತರ 1999ರಲ್ಲಿ ರಾಷ್ಟ್ರೀಯ ಉದ್ಯಾನ ಎಂಬುದಾಗಿ ಘೋಷಿಸಲಾಯಿತು.

ರಾಯಲ್ ಬೆಂಗಾಲ್‌ ಟೈಗರ್, ಘೇಂಡಾಮೃಗ, ಆನೆಗಳಿಗೆ ಈ ಅರಣ್ಯ ಪ್ರಸಿದ್ಧ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries