ಕಾಸರಗೋಡು: 2020-21 ಶೈಕ್ಷಣಿಕ ವರ್ಷ ಕಾಸರಗೋಡು ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ., ಪ್ಲಸ್-ಟು, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸಿರುವ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಜಿಲ್ಲಾ ಪರಿಶಿಷ್ಟ ಪಂಗಡ ಇಲಾಖೆ ಪೆÇ್ರೀತ್ಸಾಹಕ ಆರ್ಥಿಕ ಸಹಾಯ ಒದಗಿಸಿತ್ತಿದ್ದು, ಅರ್ಜಿ ಕೋರಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿ, ಸಿ ಪ್ಲಸ್ ಸಹಿತ 2 ಸಿ ಗ್ರೇಡ್, ಅದಕ್ಕಿಂತ ಅಧಿಕ, ಪ್ಲಸ್-ಟು ನಲ್ಲಿ ಸಿ.ಸಿ ಪ್ಲಸ್ ಸಹಿತ 2 ಸಿ ಗ್ರೇಡ್, ಅದಕ್ಕಿಂತ ಅಧಿಕ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಸೇ 60ಕ್ಕಿಂತ ಅಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 2020-21 ಶೈಕ್ಷಣಿಕ ವರ್ಷ ಎಸ್.ಎಸ್.ಎಲ್.ಸಿ.,ಪ್ಲಸ್-ಟು, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಮೊದಲ ಬಾರಿಯ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರುವ, ಕಾಸರಗೋಡುಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆ ನಡೆಸಿದ, ಕಾಸರಗೊಡು ಟ್ರೈಬಲ್ ಡೆವೆಲಪ್ ಮೆಂಟ್ ಕಚೇರಿ ವ್ಯಾಪ್ತಿಯ ಮಂದಿಯಾಗಿರಬೇಕು. ಅಂಕಪಟ್ಟಿ, ಜಾತಿ ಅರ್ಹತಾ ಪತ್ರ, ರಾಷ್ಟ್ರೀಕೃತ ಬಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡು ಇತ್ಯಾದಿಗಳ ನಕಲು, ದೂರವಾಣಿ ಸಂಖ್ಯೆ ಸಹಿತ ಕಾಸರಗೋಡು ಟ್ರೈಬಲ್ ಕಚೇರಿಗೆ ಯಾ ಎಣ್ಮಕಜೆ/ ಕಾಸರಗೋಡು/ ನೀಲೇಶ್ವರ ಗಳ ಟ್ರೈಬಲ್ ವಿಸ್ತರಣೆ ಕಚೇರಿಗಳಲ್ಲಿ ಸೆ.30ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗೆ: 04994255466.