ಕಾಸರಗೋಡು: ಸೆ.10,11 ರಂದು ನಡೆಯುವ ಗಣೇಶೋತ್ಸವದಲ್ಲಿ ದೇವಾಲಯದೊಳಗಣ ಆಚರಣೆಗಳಿಗೆ ಮಾತ್ರ ಕೋವಿಡ್ ಕಟ್ಟುನಿಟ್ಟುಗಳ ಪಾಲನೆಯೊಂದಿಗೆ ಆಚರಿಸಲು ಅನುಮತಿಯಿದೆ ಎಂದು ಜಿಲ್ಲಾ ಕೊರೋನಾ ಕೋರ್ ಸಮಿತಿ ಸಭೆ ತಿಳಿಸಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸರಕಾರದ ಆದೇಶ ಪ್ರಕಾರ ಈ ವಿಚಾರ ಪ್ರಕಟಿಸಲಾಗಿದೆ. ನಿಗದಿತ ಜನ ಮಾತ್ರ ಈ ವೇಳೆ ಭಾಗವಹಿಸಬೇಕು. ಈ ಸಂಬಂಧ ಅಗತ್ಯದ ಕ್ರಮ ಕೈಗೊಳ್ಳಲು ಜಿಲ್ಲಾ ಪೆÇಲೀಸ್ ವರಿಷ್ಠಧಿಕಾರಿ ಮತ್ತು ಹೆಚ್ಚುವರಿ ದಂಡನಾಧಿಕಾರಿಗೆ ಹೊಣೆ ನೀಡಲಾಗಿದೆ.