ಕಾಸರಗೋಡು: ಕಾಞಂಗಾಡು ನಗರದಲ್ಲಿ ಸಂಚಾರ ಮುಗ್ಗಟ್ಟು ಪರಿಹಾರಕ್ಕೆ ಟ್ರಾಫಿಕ್ ಪರಿಷ್ಕರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಪೂರ್ವಭಾವಿಯಾಗಿ ವೈಜ್ಞಾನಿಕ ವ್ಯವಸ್ಥೆಗಳೊಂದಿಗೆ ಈ ಕುರಿತು ಅಧ್ಯಯನ ನಡೆಸಲು ಟ್ರಾಫಿಕ್ ರೆಗ್ಯುಲೇಟರಿ ಸಮಿತಿಯ ಉಪಸಮಿತಿ ನಗರದಲ್ಲಿ ತಪಾಸಣೆ ನಡೆಸಿದೆ. ಪುದಿಯಕೋಟೆಯಿಂದ ನಾರ್ತ್ ಕೋಟಚ್ಚೇರಿ ವರೆಗೆ ಪಾಕಿರ್ಂಗ್ ಏರಿಯ ಪತ್ತೆ ಮಾಡಲು, ಪಾಕಿರ್ಂಗ್ ಏರಿಯಾಗಳಲ್ಲಿ ನಡೆಯುತ್ತಿರುವ ಕಾನೂನು ಉಲ್ಲಂಘನೆ ತಪಾಸಣೆ ನಡೆಸಲಾಗಿದೆ. ನಗರಸಭೆ, ಪೆÇಲೀಸ್, ಲೋಕೋಪಯೋಗಿ ಇಲಾಖೆಯ ರಸ್ತೆ ವಿಭಾಗ, ಮೋಟಾರುವಾಹನ ಇಲಾಖೆಗಳ ನೇತೃತ್ವದ ತಂಡ ತಪಾಸಣೆ ನಡೆಸಿದೆ.
ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಕಾಞಂಗಾಡು ಡಿ.ವೈಎಸ್.ಪಿ. ಡಾ.ವಿ.ಬಾಲಕೃಷ್ಣನ್, ನಗರಸಭೆ ಕಾರ್ಯದರ್ಶಿ ರಾಯ್ ಮ್ಯಾಥ್ಯೂ ಮೊದಲಾದವರು ನೇತೃತ್ವ ವಹಿಸಿದ್ದರು.